Publish Date: Thu, 20 Sep 2018 (09:23 IST)
Updated Date: Thu, 20 Sep 2018 (09:24 IST)
ಬೆಂಗಳೂರು: ಹಲವು ಬಾಹ್ಯ ಮತ್ತು ಮಾನಸಿಕ ಪರಿಸ್ಥಿತಿಗಳು ದೈನಂದಿನ ಜೀವನದಲ್ಲಿ ಪರಿಣಾಮ ಬೀರಿದಾಗ ಲೈಂಗಿಕ ನಿರಾಸಕ್ತಿ ಉಂಟಾಗುವುದು ಸಹಜ.
ಲೈಂಗಿಕ ನಿರಾಸಕ್ತಿಗೆ ಅತಿಯಾಗಿ ಟಿವಿ ನೋಡುವುದೂ ಕಾರಣವಾಗಬಹುದು ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಅತಿಯಾಗಿ ಟಿವಿ ನೋಡುವುದರಿಂದ ಬೆಡ್ ರೂಂನಲ್ಲಿ ಆಸಕ್ತಿ ಕಳೆದುಕೊಳ್ಳುತ್ತೀರಿ ಮತ್ತು ಬೇಗನೇ ಸುಸ್ತಾಗುತ್ತೀರಿ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಟಿವಿ ನೋಡುತ್ತಾ ಕೂರುವುದರಿಂದ ನಿಮ್ಮ ಸಂಗಾತಿಯೂ ಸೆಕ್ಸ್ ಬಗ್ಗೆ ಆಸಕ್ತಿ ಕಳೆದುಕೊಂಡು ನಿದ್ರೆಗೆ ಜಾರಬಹುದು. ಅಷ್ಟೇ ಅಲ್ಲ, ಟಿವಿಯಂತಹ ವಿಡಿಯೋ ಎಂಟರ್ ಟೈನ್ ಮೆಂಟ್ ನೋಡುತ್ತಿದ್ದರೆ ಕಣ್ಣು, ಮನಸ್ಸೂ ಸುಸ್ತಾಗಿರುತ್ತದೆ. ಟಿವಿಯಂತೇ ವಿಡಿಯೋ ಗೇಮ್, ಮೊಬೈಲ್ ನೋಡುತ್ತಾ ಕೂತರೂ ಲೈಂಗಿಕ ನಿರಾಸಕ್ತಿ ಕಾಡುವುದು ಸಹಜ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.