Publish Date: Wed, 19 Sep 2018 (10:03 IST)
Updated Date: Wed, 19 Sep 2018 (10:05 IST)
ಬೆಂಗಳೂರು: ಅಕ್ರಮ ಹಣ ಸಾಗಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಗೆ ಅನಾರೋಗ್ಯದ ಶಾಕ್ ಸಿಕ್ಕಿದೆ.
ಕಲಬರಗಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನಿನ್ನೆ ಬೆಂಗಳೂರಿಗೆ ಹೈದರಾಬಾದ್ ನಿಂದ ಬರುವಾಗ ವಿಮಾನದಲ್ಲಿ ನೀಡಿದ್ದ ಆಹಾರ ಸೇವಿಸಿ ಡಿಕೆಶಿ ಅಸ್ವಸ್ಥರಾಗಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ವಿಶ್ರಾಂತಿ ಪಡೆದರು.
ಆದರೆ ಹೊಟ್ಟೆನೋವು ಉಲ್ಬಣಗೊಂಡಿದ್ದರಿಂದ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.