Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಯ್ ಫ್ರೆಂಡ್ ಸುಳ್ಳು ಹೇಳುತ್ತಿದ್ದಾನೆಯೇ? ಪತ್ತೆ ಮಾಡೋದು ಸುಲಭ!

ಬಾಯ್ ಫ್ರೆಂಡ್ ಸುಳ್ಳು ಹೇಳುತ್ತಿದ್ದಾನೆಯೇ? ಪತ್ತೆ ಮಾಡೋದು ಸುಲಭ!
ಬೆಂಗಳೂರು , ಶನಿವಾರ, 8 ಸೆಪ್ಟಂಬರ್ 2018 (09:38 IST)
ಬೆಂಗಳೂರು: ನಿಮ್ಮ ಬಾಯ್ ಫ್ರೆಂಡ್ ಸುಳ್ಳು ಹೇಳ್ತಿದ್ದಾನೆ ಎಂಬ ಅನುಮಾನವಿದೆಯೇ? ಹಾಗಿದ್ದರೆ ಅದನ್ನು ಆತನ ಸ್ವಭಾವದಿಂದಲೇ ಪತ್ತೆ ಮಾಡಬಹುದು.

ಅತಿಯಾದ ಸಮರ್ಥನೆ
ನೀನು ಮಾಡಿದ್ದು ಸರಿಯಲ್ಲ ಎಂದಾಗ ಅಥವಾ ನೀನು ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನಿಸಿದರೆ ಅತಿಯಾಗಿ ಸಮರ್ಥಿಸಿಕೊಳ್ಳುತ್ತಾನೆಂದರೆ ಸಂಶಯಪಡಲೇಬೇಕು!

ತಡವರಿಸುವುದು
ಕೆಲವೊಂದು ಸಣ್ಣ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸುವುದು, ನೆಪ ಹೇಳುವುದು ಮಾಡುತ್ತಿದ್ದರೆ ಅಂತಹವರನ್ನು ನಂಬಲಾಗದು.

ಒಂದೊಂದು ಸಲ ಒಂದೊಂದು ರೀತಿ
ಕೆಲವರು ಹೇಳುವುದಕ್ಕೂ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಬಾಯಲ್ಲಿ ಆಚಾರ ಮಾತನಾಡಿ ಅಸಂಬದ್ಧ ಮಾಡುವವರನ್ನು ನಂಬಲೇಬೇಡಿ

ವಿಷಯ ಮರೆಸುವುದು
ಏನೋ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವಿಷಯ ಮರೆಸುವುದು, ಇನ್ನೇನೋ ಅನಗತ್ಯ ವಿಚಾರಕ್ಕೆ ವಿಷಯಾಂತರ ಮಾಡುವವರು ಸುಳ್ಳುಬುರುಕರು ಎನ್ನುವುದರಲ್ಲಿ ಸಂಶಯ ಬೇಡ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ರಾತ್ರಿಗೆ ಸಜ್ಜಾದ ಹೆಣ್ಣಿಗೆ ಟಿಪ್ಸ್!