Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐ ಲವ್ ಯೂ ಹೇಳದೇ ಪ್ರಪೋಸ್ ಮಾಡುವುದು ಹೇಗೆ?

ಐ ಲವ್ ಯೂ ಹೇಳದೇ ಪ್ರಪೋಸ್ ಮಾಡುವುದು ಹೇಗೆ?
ಬೆಂಗಳೂರು , ಬುಧವಾರ, 24 ಜನವರಿ 2018 (08:43 IST)
ಬೆಂಗಳೂರು: ಎಷ್ಟೋ ಪ್ರೇಮಿಗಳಿಗೆ ಒಬ್ಬರನ್ನು ಇಷ್ಟವಾದರೂ ಬಾಯಿ ಬಿಟ್ಟು ಐ ಲವ್ ಯೂ ಎನ್ನುವ ಮೂರು ಶಬ್ಧ ಹೇಳಲು ಧೈರ್ಯವಿರುವುದಿಲ್ಲ. ಆದರೆ ಅದನ್ನು ಹೇಳದೆಯೂ ನಿಮ್ಮ ಪ್ರೀತಿ ಪಾತ್ರರಿಗೆ ಪ್ರಪೋಸ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಉಪಾಯ!
 

ಹೂವು
ಹೂ ಎಂದರೆ ಪ್ರೀತಿಯ ಸಂಕೇತ. ನಿಮ್ಮ ಪ್ರೀತಿಯ ಹುಡುಗ/ಹುಡುಗಿಯ ಬರ್ತ್ ಡೇ, ಅಥವಾ ಇನ್ಯಾವುದೇ ಶುಭ ದಿನದಂದು ಪ್ರೀತಿಯಿಂದ ಗುಲಾಬಿ ನೀಡಿ. ಹೂವಿನಿಂದ ಮನಸ್ಸು ಗೆಲ್ಲಬಹುದು!

ಸಂದೇಶ
ಈಗ ಮೊಬೈಲ್ ಯುಗ. ಎಲ್ಲವನ್ನೂ ಎಸ್ ಎಂಎಸ್, ವ್ಯಾಟ್ಸಪ್ ಮೂಲಕ ಹೇಳುವ ಕಾಲ. ಹಾಗಾಗಿ ಆಗಾಗ ಪ್ರೀತಿಯ ಸಂದೇಶ ಕಳುಹಿಸುತ್ತಿರಿ.

ಕಾಳಜಿ ಇರಲಿ
ನೀವು ಪ್ರೀತಿಸುತ್ತಿರುವವರಿಗೆ ಸಮಸ್ಯೆ, ಕಷ್ಟ ಬಂದಾಗ ಜತೆಗಿರಿ. ನಾನು ನಿಮ್ಮೊಂದಿಗಿದ್ದೇನೆ ಎಂಬ ಫೀಲ್ ಕೊಡಿ. ಕಷ್ಟದ ಸಂದರ್ಭದಲ್ಲಿ ಹತ್ತಿರ ಇರುವವರನ್ನು ಯಾರೂ ಮರೆಯಲ್ಲ!

ಗುದ್ದಾಡಲೂ ಹಿಂಜರಿಯದಿರಿ
ಅಗತ್ಯ ಬಂದರೆ ಆಕೆ/ಆತನಿಗಾಗಿ ಇನ್ನೊಬ್ಬರ ಜತೆ ಗುದ್ದಾಡಲೂ ಹಿಂಜರಿಯದಿರಿ. ಅವರ ಕಣ್ಣಿಗೆ ಹೀರೋ ಆಗಿ ಬಿಡುತ್ತೀರಿ. ಆ ಸಂದರ್ಭದಲ್ಲಿ ನೀವೇಕೆ ಅವರಿಗಾಗಿ ಅಷ್ಟೊಂದು ತ್ಯಾಗಕ್ಕೆ ಮುಂದಾದಿರಿ ಎನ್ನುವುದನ್ನು ಹೇಳಿಕೊಳ್ಳಿ.

ವಿಧೇಯತೆ
ಏನೇ ಕಷ್ಟ ಬರಲಿ, ಸುಖ ಬರಲಿ, ಆಕೆ/ಆತನಿಗೆ ವಿಧೇಯರಾಗಿರಿ. ಯಾವುದೇ ಕಾರಣಕ್ಕೂ ಬೇರೆಯವರ ಕಡೆಗೆ ವಿಧೇಯತೆ ಶಿಫ್ಟ್ ಆಗದಿರಲಿ. ಒಂಥರಾ ಶ್ರೀರಾಮಚಂದ್ರನ ಅವತಾರ ತಾಳಿದರೂ ತಪ್ಪಿಲ್ಲ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಡೆದ ಹಿಮ್ಮಡಿಗೆ ಈ ಮನೆ ಮದ್ದು ಮಾಡಿ