ದೆಹಲಿ : ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಹಲವು ದೇಶಗಳು ವಿದೇಶಗಳಿಂದ ಬರೋ ವಿಮಾನಗಳನ್ನ ರದ್ದು ಮಾಡಿವೆ.
ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿವೆ. ವ್ಯಾಕ್ಸಿನ್ ನೀಡಿಕೆಯನ್ನ ಚುರುಕುಗೊಳಿಸಿವೆ. ಒಮಿಕ್ರಾನ್ನಿಂದ ಮತ್ತಿನ್ನೆಷ್ಟು ಮಾರಣಹೋಮ ನಡೆಯುತ್ತೋ ಅಂತಾ ಕಂಗೆಟ್ಟು ಕೂತಿದ್ದಾರೆ. ಆದ್ರೆ, ಒಮಿಕ್ರಾನ್ ವೈರಸ್ನ್ನ ಮೊದಲು ಪತ್ತೆ.
ಒಮಿಕ್ರಾನ್ ಸೋಂಕಿನ ಬಗ್ಗೆ ಜಗತ್ತಿಗೆ ಮೊದಲು ಹೇಳಿದ್ದೇ ನಾನು. ನನ್ನ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ಒಮಿಕ್ರಾನ್ ಇರೋದನ್ನ ಪತ್ತೆ ಹಚ್ಚಿದ್ದೆ. ನಾನು ಸುಮಾರು 33 ವರ್ಷಗಳಿಂದ ಹಲವು ವೈದ್ಯಕೀಯ ಸವಾಲುಗಳನ್ನ ಕಂಡಿದ್ದೇನೆ. ಆದರೆ ನನ್ನ ಒಂದೇ ಒಂದು ಹೇಳಿಕೆಗೆ ಇಡೀ ಜಗತ್ತೇ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸಿದ್ದನ್ನ ನೋಡಿದ್ದು ಇದೇ ಮೊದಲು.
ನನ್ನ ರೋಗಿಯೇ ಒಮಿಕ್ರಾನ್ ಸೋಂಕಿತ ಅಂತಾ ಹೇಳಿದಾಗ. ಇಡೀ ಜಗತ್ತೇ ನನ್ನ ಪಾತ್ರದ ಬಗ್ಗೆ ಮಹತ್ವ ನೀಡಿದೆ. ನನಗೆ ತಿಳಿಯದೆ ಜಗತ್ತಿನ ಗಮನ ಸೆಳೆದಿದ್ದೇನೆ. ಆದರೆ ಒಮಿಕ್ರಾನ್ ಬಗ್ಗೆ ಜಗತ್ತಿನ ಅದರಲ್ಲೂ ಬ್ರಿಟನ್ನ ಪ್ರತಿಕ್ರಿಯೆ ಕಂಡು ನಿಜಕ್ಕೂ ದಿಗ್ಭ್ರಮೆಗೊಂಡಿದ್ದೇನೆ. ಒಮಿಕ್ರಾನ್ ಡೆಲ್ಟಾಗಿಂತ ಡೇಂಜರ್ ಅಲ್ಲ.