ಮುಂಬೈ: ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಇದ್ದಿದ್ದ ಅನುಮಾನಗಳಿಗೆ ಬಿಸಿಸಿಐ ಖಜಾಂಜಿ ಅರುಣ್ ಧುಮಾಲ್ ಪ್ರತಿಕ್ರಿಯಿಸಿದ್ದಾರೆ.
ಆಫ್ರಿಕಾ ನಾಡಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಟೀಂ ಇಂಡಿಯಾ ಆ ದೇಶಕ್ಕೆ ಪ್ರವಾಸ ಮಾಡುವುದು ಅನುಮಾನ ಎಂಬ ವರದಿಗಳಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಅರುಣ್ ಧುಮಾಲ್, ಸದ್ಯದ ಮಟ್ಟಿಗೆ ಆಫ್ರಿಕಾ ಪ್ರವಾಸ ಮುಂದುವರಿಯಲಿದೆ. ಆಫ್ರಿಕಾದಲ್ಲಿ ಬಯೋಬಬಲ್ ವಾತಾವರಣದಲ್ಲಿ ಆಟಗಾರರು ಸುರಕ್ಷಿತವಾಗಿರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ 8 ರಂದು ಟೀಂ ಇಂಡಿಯಾ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ.