Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಂಗಳೂರಿನಲ್ಲಿ ಕೋವಿಡ್ ಮೂರನೇ ಅಲೆ ಯಾವಾಗ? ಪಕ್ಕಾ ಟೈಮ್ ಹೇಳಿದೆ ತಜ್ಞರ ಸಮಿತಿ!

ಬೆಂಗಳೂರಿನಲ್ಲಿ ಕೋವಿಡ್ ಮೂರನೇ ಅಲೆ ಯಾವಾಗ? ಪಕ್ಕಾ ಟೈಮ್ ಹೇಳಿದೆ ತಜ್ಞರ ಸಮಿತಿ!
ಬೆಂಗಳೂರು , ಶುಕ್ರವಾರ, 27 ಆಗಸ್ಟ್ 2021 (09:10 IST)
ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯ ಪ್ರಕಾರ ಸೆಪ್ಟೆಂಬರ್ ನಲ್ಲಿ ಕೊರೋನ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆಯಂತೆ. ಆದರೆ ಬಿಬಿಎಂಪಿ ತಾಂತ್ರಿಕ ಸಲಹಾ ಸಮಿತಿ ಪಾಲಿಕೆಗೆ ಕೊಟ್ಟ ವರದಿಯ ಉಲ್ಲೇಖಗಳೇ ಬೇರೆ. ಬೆಂಗಳೂರಿನಲ್ಲಿ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆ ಇದಯೇ.? ಇದ್ದರೆ ಯಾವಾಗ ಎಂಬ ಪ್ರಶ್ನೆಗೆ ತನ್ನ ವರದಿಯಲ್ಲಿ ಪಾಲಿಕೆ ತಾಂತ್ರಿಕ ಸಲಹಾ ಸಮಿತಿ ಉತ್ತರಿಸಿದೆ.

ತಾಂತ್ರಿಕ ಸಲಹಾ ಸಮಿತಿ ವರದಿ ನೋಡಿ ಬಿಬಿಎಂಪಿಗೆ  ಟೆನ್ಷನ್ ಹೆಚ್ಚಿದೆ.ಸದ್ಯ ಬೆಂಗಳೂರಿನಲ್ಲಿ ಪ್ರತಿ ದಿನ ಸರಾಸರಿ 300 ಪ್ರಕರಣಗಳು, ಒಂದಕ್ಕಿ ಸಾವಿನ ಸಂಖ್ಯೆ ಪತ್ತೆಯಾಗುತ್ತಿದೆ. ಶ್ರಾವಣ ಮಾಸದ ಹಿನ್ನೆಲೆ ಸಾಲು ಸಾಲು ಹಬ್ಬಗಳ ತಲೆನೋವು ಪಾಲಿಕೆಗಿದೆ. ಇದರ ನಡುವೆ ಬಿಬಿಎಂಪಿಯನ್ನು ಮೂರನೇ ಅಲೆಯ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿ ದಂಗುಬಡಿಸಿದೆ. ಬೆಂಗಳೂರಿಗೆ ಮೂರನೇ ಅಲೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ತಜ್ಞರು ಉತ್ತರಿಸಿದ್ದಾರೆ.
ವರಮಹಾಲಕ್ಷ್ಮಿ, ನಾಗರ ಪಂಚಮಿ ಹಬ್ಬದ ವಿಚಾರವಾಗಿ ಕತ್ತಿಯ ಅಲಗಿನ ಮೇಲೆ ನಡೆದಿದ್ದ ಪಾಲಿಕೆಗೆ ಈಗ ಗೌರಿ ಗಣೇಶ ಹಬ್ಬದ ದಿನ ಬರುತ್ತಿರುವ ಹಿನ್ನೆಲೆ ಕೊರೋನಾ ಕಂಟ್ರೋಲ್ ಮಾಡುವ ಟೆನ್ಷನ್ ಆರಂಭವಾಗಿದೆ. ಈ ನಡುವೆ ಬೆಂಗಳೂರಿಗೆ ಕೊರೋನಾ ಮೂರನೇ ಅಲೆ ಸೆಪ್ಟೆಂಬರ್ನಲ್ಲಿ ಅಲ್ಲ.. ಮತ್ಯಾವಾಗ.!? ಎಂಬ ಪ್ರಶ್ನೆ ಜನ ಸಾಮಾನ್ಯರದ್ದು. ಮೂರನೇ ಅಲೆ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಬಳಿ ಪಾಲಿಕೆ ವರದಿ ಕೇಳಿತ್ತು.
ಇನ್ನು ಮೂರನೇ ಅಲೆ ಆಗಸ್ಟ್ ನಲ್ಲಿ ಆರಂಭವಾಗುವ ಸಾಧ್ಯತೆ ಇದೆ ಅಂತ ಆಸಗ್ಟ್ ಗು ಮೊದಲು ಹೇಳಲಾಗ್ತಿತ್ತು. ಅದಾದ ಬಳಿಕ ಈಗ ಸೆಪ್ಟೆಂಬರ್ ನಲ್ಲಿ ಮೂರನೇ ಅಲೆ ಸಂಭವ ಎದುರಾಗಬಹುದು ಎಂಬ ಎಚ್ಚರಿಕೆಯನ್ನು ತಜ್ಞರು ನೀಡಿದ್ದಾರೆ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ತಾಂತ್ರಿಕ ಸಲಹಾ ಸಮಿತಿ ಕೊಟ್ಟ ವರದಿಯಲ್ಲಿ ಬೆಂಗಳೂರಿನಲ್ಲಿ ಯಾವಾಗ ಮೂರನೇ ಅಲೆ ಅರಂಭವಾಗಲಿದೆ ಎಂಬ ಬಗ್ಗೆ ಉಲ್ಲೇಖವಿದೆ. ಪಾಲಿಕೆ ಟಾಸ್ಕ್ ಫೋರ್ಸ್ ಹೇಳುವ ಪ್ರಕಾರ ಬೆಂಗಳೂರಿನಲ್ಲಿ ಹೊಸ ರೂಪಾಂತರಿ ಯಾವಾಗ ಪತ್ತೆಯಾಗುತ್ತೋ ಅದೇ ಮೂರನೇ ಅಲೆ ಆರಂಭ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ ರಂದೀಪ್ ನ್ಯೂಸ್ 18 ಗೆ ತಿಳಿಸಿದ್ದಾರೆ.
ಮೂರನೇ ಅಲೆ ಬಗ್ಗೆ ಸ್ಪಷ್ಟ ಮಾಹಿತಿ ಪಾಲಿಕೆಗೆ ಕೊಟ್ಟ ಟಾಸ್ಕ್ ಫೋರ್ಸ್.!
ಸದ್ಯ ಬೆಂಗಳೂರಿನಲ್ಲಿ ಮೂರು ಮಾದರಿಯ ರೂಪಾಂತರಿ ವೈರಸ್ ಪತ್ತೆಯಾಗಿದೆ. ಡೆಲ್ಟಾ, ಡೆಲ್ಟಾ ಪ್ಲಸ್, ಹಾಗೂ ಕಾಪಾ ಎನ್ನುವ ರೂಪಾಂತರಿಗಳ ಪತ್ತೆಯಾಗಿದೆ. ಸದ್ಯಕ್ಕೆ ಮೂರು ಡೆಲ್ಟಾ ಪ್ಲಸ್ ಪ್ರಕರಣಗಳು ಮಾತ್ರ ನಗರದಲ್ಲಿ ಪತ್ತೆಯಾಗಿರುವಂತದ್ದು. ಜಿನೋಮ್ ಸೀಕ್ವೆನ್ಸಿಂಗ್ ನಲ್ಲಿ ಕಾಪಾ ಎನ್ನುವ ಹೊಸ ಪ್ರಬೇಧವೊಂದನ್ನು ತಜ್ಞರು ಗುರುತಿಸಿದ್ದಾರೆ. ಇದರ ಹೊರತಾಗಿ ಇನ್ನೇನಾದರೂ ಹೊಸ ರೂಪಾಂತರಿ ಪತ್ತೆಯಾದರೆ ಅದೇ ಆರಂಭ ಎಂದಿದ್ದಾರಂತೆ ತಜ್ಞರು. ಇದಕ್ಕೆ ಕಾಲದ ಗಡಿ ಇಲ್ಲ, ಯಾವಾಗ ಹೊಸ ವೇರಿಯೆಂಟ್ ಪತ್ತೆಯಾಗುತ್ತೋ ಅದೇ ಆರಂಭ.ಹೀಗಾಗಿ ಟೆಸ್ಟಿಂಗ್, ವ್ಯಾಕ್ಸಿನ್ ಹಂಚಿಕೆ ಹೆಚ್ಚಿಸಲು ಪಾಲಿಕೆ ಕೊರೋನಾ ತಾಂತ್ರಿಕ ಸಮಿತಿ ಸಲಹೆ ಕೊಟ್ಟಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಅಫ್ಘನ್ನಲ್ಲಿ ಶಾಂತಿ ನೆಲೆಸಲು ಭಾರತ ಶ್ರಮಿಸಬೇಕು; ದೇವೇಗೌಡ