ಬೆಂಗಳೂರು(ಆ.17): ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ಕೊರೋನಾ ಕೇಸ್ಗಳು ಕಡಿಮೆಯಾಗುತ್ತಿವೆ. ಆದರೆ ರಾಜಧಾನಿಯಲ್ಲಿ ಲಸಿಕೆ ವಿತರಣೆಯಲ್ಲಿ ಏರಿಕೆಯಾಗಿಲ್ಲ.
ಬದಲಿಗೆ ಲಸಿಕೆ ಕೊರತೆ ಎದುರಾಗಿದೆ. ಹೌದು, ಕಳೆದ 10 ದಿನಗಳಲ್ಲಿ ಲಸಿಕೆ ವಿತರಣೆಯಲ್ಲಿ ಇಳಿಮುಖವಾಗಿದೆ. ಹೀಗಾಗಿ ಬಿಬಿಎಂಪಿ ಲಸಿಕೆ ಕೊರತೆಯನ್ನು ಎದುರಿಸುತ್ತಿದೆ.
ಬಿಬಿಎಂಪಿ ಪ್ರತಿನಿತ್ಯ ಒಂದು ಲಕ್ಷ ಲಸಿಕೆ ಹಾಕುವ ಗುರಿ ಹೊಂದಿದೆ. ಆದರೆ ಆ.12ರಂದು ಅತ್ಯಂತ ಕಡಿಮೆ ಅಂದರೆ 28,906 ಲಸಿಕೆಯನ್ನು ವಿತರಣೆ ಮಾಡಲಾಗಿದೆ. ಆ.7ರಂದು 88,385 ಲಸಿಕೆ ಹಾಕಲಾಗಿದ್ದು, ಇದೇ ಅತಿ ಹೆಚ್ಚು ಎಂದು ತಿಳಿದು ಬಂದಿದೆ. ಉಳಿದ 9 ದಿನಗಳಲ್ಲಿ ಸರಾಸರಿ 40-50 ಸಾವಿರ ಲಸಿಕೆ ಹಾಕಲಾಗಿದೆ.