Select Your Language

Notifications

webdunia
webdunia
webdunia
webdunia

ಯುದ್ಧ : ಭಾರೀ ಏರಿಕೆ ಕಂಡ ಕಚ್ಚಾತೈಲ !

War: Crude oil prices soaring!
ಲಂಡನ್ , ಸೋಮವಾರ, 7 ಮಾರ್ಚ್ 2022 (11:07 IST)
ಲಂಡನ್ : ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ.
 
ಸೋಮವಾರ 1 ಬ್ಯಾರಲ್ಗೆ 130 ಡಾಲರ್ (10,006 ರೂ.) ಆಗಿದ್ದು, ಇದೇ ಮೊದಲ ಬಾರಿಗೆ ಕಳೆದ 14 ವರ್ಷಗಳಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಈಗಾಗಲೇ ರಷ್ಯಾ, ಉಕ್ರೇನ್ ಯುದ್ಧ ಜಾಗತೀಕ ಮಟ್ಟದಲ್ಲಿ ಸಾಕಷ್ಟು ಪರಿಣಾಮ ಬೀರುತ್ತಿದೆ. ಜೊತೆಗೆ ವಿಶ್ವ ಮಟ್ಟದಲ್ಲಿ ಕಚ್ಚಾ ತೈಲ ಪೂರೈಕೆ ಮೇಲೆ ಅಗಾಧ ಪರಿಣಾಮ ಬೀರಿದ್ದು, ದರ ಶೇ.7 ರಷ್ಟು ಅಧಿಕ ಏರಿಕೆಯಾಗಿದೆ.

ಈ ಏರಿಕೆಯು 2008ರ ಜುಲೈ ನಂತರ ಇದು ಅತ್ಯಧಿಕ ಮಟ್ಟದಲ್ಲಿ ಏರಿಕೆಯಾಗಿದೆ. 2008ರಲ್ಲಿ 143 ಡಾಲರ್(10,991 ರೂ.) ಏರಿಕೆಯಾಗಿತ್ತು. ಈ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆಯು 2013ರ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಒಂದು ಬ್ಯಾರೆಲ್ಗೆ 119 ಡಾಲರ್ (9,144 ರೂ.) ಏರಿಕೆಯಾಗಿತ್ತು. ಇದು ಈವರೆಗೆ ಗರಿಷ್ಠ ಮಟ್ಟದ ಏರಿಕೆಯಾಗಿತ್ತು. ಕಳೆದ ಬುಧವಾರ 1 ಬ್ಯಾರಲ್ಗೆ 113 ಡಾಲರ್ಗೆ (8,565 ರೂಪಾಯಿ) ಏರಿಕೆಯಾಗಿತ್ತು.

ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಸ್ಥಿರಗೊಳಿಸುವ ಯತ್ನದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ತನ್ನ ಆಯಾಕಟ್ಟಿನ ಮೀಸಲುಗಳಿಂದ ಅಮೆರಿಕ ಸುಮಾರು 60 ಮಿಲಿಯನ್ ಬ್ಯಾರಲ್ ಬಿಡುಗಡೆ ಮಾಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. 

ಕಳೆದ ನವೆಂಬರ್ನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರಕಾರ ಕಡಿತಗೊಳಿಸಿತ್ತು. ಬಳಿಕ ತೈಲ ದರ ಪರಿಷ್ಕರಣೆಯಾಗಿಲ್ಲ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದರೂ ತೈಲ ಮಾರಾಟ ಕಂಪನಿಗಳು ಪಂಚ ರಾಜ್ಯಗಳ ಚುನಾವಣೆ ಕಾರಣಕ್ಕೆ ದರ ಏರಿಕೆಯನ್ನು ತಡೆ ಹಿಡಿದಿವೆ.

ದಲ್ಲಿ ಮಿತ್ರರಾಷ್ಟ್ರಗಳೊಂದಿಗೆ ತನ್ನ ಆಯಾಕಟ್ಟಿನ ಮೀಸಲುಗಳಿಂದ ಅಮೆರಿಕ ಸುಮಾರು 60 ಮಿಲಿಯನ್ ಬ್ಯಾರಲ್ ಬಿಡುಗಡೆ ಮಾಡಿದೆ. ಆದರೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. 

ಕಳೆದ ನವೆಂಬರ್ನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಸುಂಕವನ್ನು ಕೇಂದ್ರ ಸರಕಾರ ಕಡಿತಗೊಳಿಸಿತ್ತು. ಬಳಿಕ ತೈಲ ದರ ಪರಿಷ್ಕರಣೆಯಾಗಿಲ್ಲ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದರೂ ತೈಲ ಮಾರಾಟ ಕಂಪನಿಗಳು ಪಂಚ ರಾಜ್ಯಗಳ ಚುನಾವಣೆ ಕಾರಣಕ್ಕೆ ದರ ಏರಿಕೆಯನ್ನು ತಡೆ ಹಿಡಿದಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿ ವಿಚಾರಕ್ಕೆ ತಂದೆಯನ್ನು ಕೊಂದು ಸುಟ್ಟು ಹಾಕಿದ ಮಗ