Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಷ್ಯಾ ‘ಕದನ ವಿರಾಮ’ ವಿಫಲ

ರಷ್ಯಾ ‘ಕದನ ವಿರಾಮ’ ವಿಫಲ
ನವದೆಹಲಿ , ಭಾನುವಾರ, 6 ಮಾರ್ಚ್ 2022 (13:59 IST)
ಯುದ್ಧಪೀಡಿತ ಉಕ್ರೇನ್ನ ಎರಡು ನಗರಗಳಿಂದ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಉದ್ದೇಶಿದಿಂದ ರಷ್ಯಾ 2 ನಗರಗಳಲ್ಲಿ ಶನಿವಾರ ಸಾರಿದ್ದ ಕೆಲ ಹೊತ್ತಿನ ಕದನ ವಿರಾಮ ವಿಫಲವಾಗಿದೆ.
 
ಕದನವಿರಾಮ ಘೋಷಿಸಿದ ಬಳಿಕವೂ ರಷ್ಯಾ ಭಾರೀ ಶೆಲ್ ದಾಳಿ ಮುಂದುವರಿಸಿದೆ ಎಂದು ಉಕ್ರೇನ್ ಆರೋಪಿಸಿದ್ದು, ಈ ಕದನ ವಿರಾಮ ವಿಫಲವಾದಂತಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12:30ರಿಂದ ಮರಿಯುಪೋಲ್ ಮತ್ತು ವೊಲ್ನೋವಖಾದಿಂದ ನಾಗರಿಕರ ತೆರವಿಗೆ ಮಾನವೀಯ ನೆಲೆಯಲ್ಲಿ ಮಿಲಿಟರಿ ಕಾರಾರಯಚರಣೆಯನ್ನು ನಿಲ್ಲಿಸಲಾಗುತ್ತದೆ.

ಈ ವೇಳೆ ಆಹಾರ ಮತ್ತು ಔಷಧಿಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ರಷ್ಯಾ ಶನಿವಾರ ಬೆಳಗ್ಗೆ ಘೋಷಿಸಿತ್ತು. ಅಲ್ಲದೆ, ‘ಮರಿಯುಪೋಲ್ನಿಂದ 2 ಲಕ್ಷ ಮಂದಿ ಮತ್ತು ವೊಲ್ನೋವಖಾದಿಂದ 20,000 ಜನರು ಸ್ಥಳಾಂತರಕ್ಕೆ ಪ್ರಯತ್ನಿಸುತ್ತಿದ್ದಾರೆ’ ಎಂದು ರಷ್ಯಾದ ‘ಸ್ಪುಟ್ನಿಕ್’ ಮಾಧ್ಯಮ ವರದಿ ಮಾಡಿತ್ತು.

ಆದರೆ ರಷ್ಯಾ ಎಷ್ಟುಅವಧಿಯವರೆಗೆ ಕದನ ವಿರಾಮ ಇರಲಿದೆ ಎಂಬ ಸ್ಪಷ್ಟಮಾಹಿತಿ ನೀಡಿರಲಿಲ್ಲ. ಇದು ಗೊಂದಲಕ್ಕೆ ಕಾರಣವಾಯಿತು. ಇದರ ನಡುವೆಯೇ, ‘ರಷ್ಯಾ ಮರಿಯುಪೋಲ್ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಶೆಲ್ ದಾಳಿ ನಡೆಸಿದೆ. ಹೀಗಾಗಿ ಯಾವುದೇ ನಾಗರಿಕರನ್ನು ಸ್ಥಳಾಂತರ ಕಾರ್ಯ ಕೈಗೂಡಲಿಲ್ಲ’ ಎಂದು ಉಕ್ರೇನ್ ಹೇಳಿಕೆ ನೀಡಿದೆ. ಇದರೊಂದಿಗೆ ಕದನವಿರಾಮದ ಆಶಯ ಈಡೇರದಂತಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಸಂಸ್ಥೆಯಲ್ಲಿ ರಷ್ಯಾ ಭರವಸೆ