Publish Date: Fri, 19 Nov 2021 (19:42 IST)
Updated Date: Fri, 19 Nov 2021 (20:54 IST)
ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಒಂದೇ ಸಮ ಮಳೆ ಸುರಿಯುತ್ತಿದೆ.
ತಿರುಮಲ ಬೆಟ್ಟದ ಶಿಖರದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಎರಡು ದಿನಗಳ ಮಟ್ಟಿಗೆ ಮುಚ್ಚಲ್ಪಟ್ಟಿದ್ದು,
ಭಕ್ತರಿಗೆ ರವಿವಾರದವರಗೆ ದರ್ಶನ ಭಾಗ್ಯವಿಲ್ಲ. ತಿರುಪತಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ವೆಂಕಟೇಶ್ವರ ದೇವಸ್ಥಾನವು ಏಳು ಬೆಟ್ಟಗಳಿಂದ ಸುತ್ತುವರೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಏಳನೇ ಬೆಟ್ಟ ವೆಂಕಟಾದ್ರಿಯ ಶಿಖರದ ಮೇಲೆ ದೇಗುಲವಿರುವುದರಿಂದ ಮಳೆ ನೇರವಾಗಿ ದೇವಸ್ಥಾನದ ಮೇಲೆ ಸುರಿಯುತ್ತಿದೆ ಮತ್ತು ಗರ್ಭಗುಡಿಯೊಳಗೆ ನೀರು ಪ್ರವೇಶಿಸುತ್ತಿದೆ. ದೇವಸ್ಥಾನದ ಆವರಣವೆಲ್ಲ ಜಲಾವೃತಗೊಂಡಿರುವ ಕಾರಣ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಅದನ್ನು ಎರಡು ದಿನಗಳ ಮಟ್ಟಿಗೆ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ.
Ramya kosira
Publish Date: Fri, 19 Nov 2021 (19:42 IST)
Updated Date: Fri, 19 Nov 2021 (20:54 IST)