Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರದಲ್ಲಿ ಸತತ ಮಳೆ ಸುರಿಯುತ್ತಿದೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ದಾಖಲೆಯ ಮಳೆಯಾಗಿದೆ. ಇನ್ನೆರಡು ಮೂರು ದಿನಗಳವರೆಗೆ ಮಳೆ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಆರೆಂಜ್ ಮತ್ತು ಯಲ್ಲೋ ಅಲರ್ಟ್ ನ್ನು ಹೊರಡಿಸಲಾಗಿದೆ.ಹವಾಮಾನ ಇಲಾಖೆಯ ದಾಖಲೆ ಪ್ರಕಾರ ನವೆಂಬರ್ 3ರಿಂದ 10ರವರೆಗೆ ರಾಜ್ಯದಲ್ಲಿ ಶೇಕಡಾ 87ರಷ್ಟು ಹೆಚ್ಚುವರಿ ಮಳೆಯಾಗಿದೆ. ಅದರರ್ಥ ಸರಾಸರಿ ಮಳೆ 13.2 ಮಿಲಿ ಮೀಟರ್ ಗಿಂತ ಈ ಬಾರಿ 24.7 ಮಿಲಿ ಮೀಟರ್ ಮಳೆ ಸುರಿದಿದೆ. ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ರಾಜ್ಯದಲ್ಲಿ ಶೇಕಡಾ 51ರಷ್ಟು ಹೆಚ್ಚುವರಿ ಮಳೆಯಾಗಿದೆ. ಸರಾಸರಿ 150.4 ಮಿಲಿಮೀಟರ್ ಗಿಂತ 227 ಮಿಲಿ ಮೀಟರ್ ಮಳೆಯಾಗಿದೆ.