ವಾಷಿಂಗ್ಟನ್ : ಸಾಮಾಜಿಕ ಮಾಧ್ಯಮದ ಜನಪ್ರಿಯ ಟ್ವಿಟ್ಟರ್ ಲೋಗೊ ಬದಲಾವಣೆಗೊಂಡಿದೆ. ಟ್ವಿಟ್ಟರ್ನ ನೀಲಿ ಹಕ್ಕಿ ಲೋಗೊವನ್ನು ನಾಯಿ ಮರಿಯಾಗಿ ಬದಲಾಯಿಸಿರುವುದಾಗಿ ಸಿಇಒ ಎಲೋನ್ ಮಸ್ಕ್ ತಿಳಿಸಿದ್ದಾರೆ.
ಎಲೋನ್ ಮಸ್ಕ್ ಅವರ ಮನೆಯ ನಾಯಿ ಶಿಬಾ ಇನು ಮರಿಯನ್ನು ಹಾಕಿದೆ. ಆ ಮರಿಗೆ ಫ್ಲಾಕಿ ಎಂದು ಹೆಸರಿಡಲಾಗಿದೆ. ಹೀಗಾಗಿ ಟ್ವಿಟ್ಟರ್ ಲೋಗೊವನ್ನು ಫ್ಲಾಕಿ ನಾಯಿ ಮರಿಯಾಗಿ ಬದಲಾಯಿಸಲಾಗಿದೆ.
ಟ್ವಿಟ್ಟರ್ ಲಾಗಿನ್ ಆದ ಬಳಕೆದಾರರಿಗೆ ಅಚ್ಚರಿ ಕಾದಿತ್ತು. ನೀಲಿ ಹಕ್ಕಿ ಬದಲಾಗಿ ನಾಯಿ ಮರಿ ಲೋಗೊ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ. ಟ್ವಿಟ್ಟರ್ ಲೋಗೊ ಬದಲಾಗಿರುವುದನ್ನು ಅನೇಕರು ಟ್ರೋಲ್ ಕೂಡ ಮಾಡಿದ್ದಾರೆ.