Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟ್ವಿಟ್ಟರ್ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಮಸ್ಕ್

ಟ್ವಿಟ್ಟರ್ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಮಸ್ಕ್
ನವದೆಹಲಿ , ಬುಧವಾರ, 29 ಮಾರ್ಚ್ 2023 (07:11 IST)
ನವದೆಹಲಿ : ಟ್ವಿಟ್ಟರ್ ಮುಖ್ಯಸ್ಥ ಎಲಾನ್ ಮಸ್ಕ್ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಬಳಕೆದಾರರಿಗೆ ಮತ್ತೊಂದು ಮಹತ್ತರ ಬದಲಾವಣೆಯನ್ನು ಘೋಷಿಸಿದ್ದು, ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಟ್ವಿಟ್ಟರ್ನಲ್ಲಿರುವ ‘ನಿಮಗಾಗಿ’ (ಫಾರ್ ಯೂ) ಪುಟವು ಏಪ್ರಿಲ್ 15ರಿಂದ ವೆರಿಫೈಡ್ ಖಾತೆಗಳನ್ನು ಮಾತ್ರ ಹೊಂದಿರುತ್ತದೆ. ಲೆಗಸಿ ವೆರಿಫಿಕೇಷನ್ ಹೊಂದಿರುವ ಎಲ್ಲಾ ಬಳಕೆದಾರರು ಮುಂದಿನ ತಿಂಗಳು ತಮ್ಮ ಬ್ಯಾಡ್ಜ್ಗಳನ್ನು ಕಳೆದುಕೊಳ್ಳುತ್ತಾರೆ.

“ಏಪ್ರಿಲ್ 15ರಿಂದ, ಪರಿಶೀಲಿಸಿದ ಖಾತೆಗಳು ಮಾತ್ರ ನಿಮಗಾಗಿ ಶಿಫಾರಸುಗಳಲ್ಲಿ ಇರಲು ಅರ್ಹವಾಗಿರುತ್ತವೆ. ಸುಧಾರಿತ ಎಐ ಬೋಟ್ ಸಮೂಹಗಳನ್ನು ನಿಭಾಯಿಸಲು ಇದು ಏಕೈಕ ನೈಜ ಮಾರ್ಗವಾಗಿದೆ. ಇಲ್ಲದಿದ್ದರೆ ಇದು ನಿರಾಶಾದಾಯಕ ಸೋಲಿನ ಯುದ್ಧವಾಗಿದೆ. ಮತಗಟ್ಟೆಗಳಲ್ಲಿ ಮತದಾನ ಪರಿಶೀಲನೆಯ ಅಗತ್ಯವಿದೆ. ಅದೇ ಕಾರಣಕ್ಕಾಗಿ ಈ ಪರಿಶೀಲನೆ.” ಎಂದು ಎಲಾನ್ ಮಸ್ಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೀಸಲಾತಿ ವಿಚಾರವಾಗಿ ಗಲಾಟೆ ಆಗಿದ್ದು ಬಿಜೆಪಿ ಕಾರಣ: ಎಚ್ ಡಿ ಕೆ