ಈ ಸಮಾಜದಲ್ಲಿ ರಕ್ತದಾನಕ್ಕೆ ಅದರದ್ದೇ ಆದ ಮಹತ್ವವಿದೆ. ಎಲ್ಲಾ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾದದ್ದು. ಜೀವಕ್ಕೆ ಸಂಜೀವಿನಿಯಿದ್ದಂತೆ. ಮಾನವ ದೇಹದ ಜೀವಸೆಲೆಯಾಗಿರುವ ರಕ್ತವನ್ನು ದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಬಹುದು.
ಕೇವಲ ರಕ್ತ ಪಡೆಯುವವರಿಗಷ್ಟೇ ಅಲ್ಲ, ರಕ್ತದಾನ ಮಾಡುವವರಿಗೂ ಇದರಿಂದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿವೆ. ರಕ್ತದಾನ ಮಾಡಿದರೆ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳನ್ನೂ ನಿಯಂತ್ರಿಸಬಹುದು ಎಂಬುದು ನಿಮ್ಮ ಗಮನಕ್ಕಿರಲಿ.
ರಕ್ತದಾನ ಮಾಡುವುದಕ್ಕೂ ವೈದ್ಯಕೀಯ ಮಾರ್ಗಸೂಚಿಯಿರುತ್ತೆ. ಇಂತಹವರು ರಕ್ತದಾನ ಮಾಡಬೇಕು, ಮಾಡಬಾರದು ಎಂಬ ನಿಯಮವಿದೆ. ಯಾವುದೇ ದಾನ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕೇ ಹೊರತು ಕೆಡುಕುಂಟು ಮಾಡಬಾರದು.
ರಕ್ತದಾನ ಮಾಡುವಾಗ ವೈದ್ಯಕೀಯ ನಿಯಮ ಪಾಲಿಸುವುದು ತುಂಬಾ ಮುಖ್ಯ. ಆ ಮಾರ್ಗಸೂಚಿಯೇನು? ಅದನ್ನು ಯಾಕೆ ಪಾಲಿಸಬೇಕು? ಯಾರ್ಯಾರು ರಕ್ತದಾನ ಮಾಡಬಾರದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.