Select Your Language

Notifications

webdunia
webdunia
webdunia
webdunia

ರಕ್ತ ಮಾರಿ ಸ್ಮಾರ್ಟ್ ಫೋನ್ ಗೆ ದುಡ್ಡು ಹೊಂದಿಸಲು ಹೊರಟ ಯುವತಿ!

ರಕ್ತ ಮಾರಿ ಸ್ಮಾರ್ಟ್ ಫೋನ್ ಗೆ ದುಡ್ಡು ಹೊಂದಿಸಲು ಹೊರಟ ಯುವತಿ!
ಕೋಲ್ಕೊತ್ತಾ , ಗುರುವಾರ, 20 ಅಕ್ಟೋಬರ್ 2022 (09:10 IST)
ಕೋಲ್ಕೊತ್ತಾ: ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಕೊಳ್ಳಲು 16 ವರ್ಷದ ಅಪ್ರಾಪ್ತ ಯುವತಿಯೊಬ್ಬಳು ತನ್ನ ರಕ್ತ ಹಣಕ್ಕಾಗಿ ಮಾರಲು ಮುಂದಾದ ಘಟನೆ ಕೋಲ್ಕೊತ್ತಾದಲ್ಲಿ ನಡೆದಿದೆ.

ಆನ್ ಲೈನ್ ಮೂಲಕ ಬಾಲಕಿ 9 ಸಾವಿರ ರೂ. ಮೌಲ್ಯದ ಸ್ಮಾರ್ಟ್ ಫೋನ್ ಗೆ ಆರ್ಡರ್ ಮಾಡಿದ್ದಳು. ಆದರೆ ಅದಕ್ಕೆ ಹಣ ಹೊಂದಿಸುವುದು ಹೇಗೆಂದು ಆಕೆಗೆ ತಿಳಿಯಲಿಲ್ಲ.

ಹೀಗಾಗಿ ಜಿಲ್ಲಾ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಲು ಮುಂದಾದಳು. ಬಳಿಕ ಹಣಕ್ಕಾಗಿ ಬೇಡಿಕೆಯಿಟ್ಟಳು. ಇದರಿಂದ ಸಂಶಯಗೊಂಡ ಆಸ್ಪತ್ರೆ ಸಿಬ್ಬಂದಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ವಿಚಾರಣೆ ನಡೆಸಿದಾಗ ಮೊಬೈಲ್ ಖರೀದಿಗೆ ಹಣ ಹೊಂದಿಸಲು ರಕ್ತ ಮಾರಾಟಕ್ಕೆ ಮುಂದಾಗಿದ್ದಾಗಿ ಬಾಲಕಿ ಬಾಯ್ಬಿಟ್ಟಿದ್ದಾಳೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಗಮನಿಸಿ : ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ!