ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಎನ್ನುವುದು ಸಖತ್ ಟ್ರೆಂಡ್ ಆಗಿಬಿಟ್ಟಿದೆ. ಯಾರೇ ನೋಡಿದರೂ ವೆರೈಟಿ ಹಚ್ಚೆ ಹಾಕಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಆದರೆ ಈ ಹಚ್ಚೆ ಹಾಕಿಸಿಕೊಳ್ಳುವಾಗ ಬಹಳಾನೇ ಜಾಗರೂಕರಾಗಿರಬೇಕು, ಹಾಗೇ ಹಚ್ಚೆ ಹಾಕಿಸಿಕೊಂಡವರು 6 ತಿಂಗಳು ರಕ್ತದಾನ ಮಾಡಬಾರದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಹಚ್ಚೆ ಹಾಕಿಕೊಳ್ಳುವವರು 6 ತಿಂಗಳು ರಕ್ತದಾನ ಮಾಡಬಾರದಂತೆ, ಯಾಕೆಂದರೆ, ಟ್ಯಾಟೂ ಎನ್ನುವುದು ಬಹುತೇಕ ಎಲ್ಲಾ ವಯಸ್ಸಿನ ಜನರನ್ನೂ ಸೆಳೆದು ಬಿಡುತ್ತದೆ.
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ದೇಹದ ವಿವಿಧ ಭಾಗಗಳಲ್ಲಿ ವಿವಿಧ ವಿನ್ಯಾಸಗಳೊಂದಿಗೆ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಟ್ಯಾಟೂ ಹಾಕಿಸಿಕೊಳ್ಳುವಾಗ ಸ್ವಲ್ಪ ಯಾಮಾರಿದರೂ ಇತರರ ಜೀವಕ್ಕೂ ಕುತ್ತು ಬರಬಹುದು.