ಮಂಗಳೂರು : ಅಪ್ರಾಪ್ತ ಹುಡುಗಿಯರಿಗೆ ಹಣದ ಆಸೆ ತೋರಿಸಿ ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೆ ಅದನ್ನು ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ವ್ಯಕ್ತಿಯನ್ನು ಮಹಿಳೆಯೊಬ್ಬಳು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕೇರಳ ಮೂಲದ 65 ವರ್ಷದ ಶಶಿ ಎಂಬಾತ ಹಲವು ವರ್ಷಗಳಿಂದ ಯುವತಿಯರನ್ನು ಹಣದಾಸೆ ತೋರಿಸಿ, ಕಾಮದಾಟ ನಡೆಸುತ್ತಿದ್ದ ಅಷ್ಟೇ ಅಲ್ಲದೇ ಅದನ್ನು ಕ್ಯಾಮೆರಾ ಇಟ್ಟು ಚಿತ್ರೀಕರಿಸುತ್ತಿದ್ದ. ಈ ಬಗ್ಗೆ ತಿಳಿದುಕೊಂಡ ಯುವತಿಯೊಬ್ಬಳು ಕ್ಯಾಮೆರಾ ಚಿಪ್ ತೆಗೆದು, ಮಂಗಳೂರಿನ ಬಿಜೆಪಿ ಕಾರ್ಯಕರ್ತೆ ಶ್ರೀಲತಾ ಎಂಬವರಿಗೆ ನೀಡಿದ್ದಳು. ಹೀಗಾಗಿ ಶ್ರೀಲತಾ ಶಶಿಯನ್ನು ಟ್ರ್ಯಾಪ್ ಮಾಡಿ, ಹಿಡಿದು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾಳೆ.
ಆದರೆ ಕದ್ರಿ ಪೊಲೀಸರು ಈ ಕೇಸ್ ಬಗ್ಗೆ ನಿರ್ಲಕ್ಷ್ಯ ಮಾಡಿ ಆತನನ್ನು ಬಂಧಿಸಿ ವಿಚಾರಣೆ ನಡೆಸದೆ ಬಿಟ್ಟು ಬಿಟ್ಟಿದ್ದಾರೆ. ನಂತರ ಆತ ಬರ್ಕೆ ಠಾಣೆಯಲ್ಲಿ ಶ್ರೀಲತಾ ವಿರುದ್ಧ ದರೋಡೆ ದೂರು ದಾಖಲಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.