Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತ್ ಬಂದ್ ಗೆ ವಿರೋಧ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ ಮುಖಂಡ

ಭಾರತ್ ಬಂದ್ ಗೆ ವಿರೋಧ ವ್ಯಕ್ತಪಡಿಸಿದ ಹಿರಿಯ ಕಾಂಗ್ರೆಸ್ ಮುಖಂಡ
ಮಂಗಳೂರು , ಸೋಮವಾರ, 10 ಸೆಪ್ಟಂಬರ್ 2018 (10:04 IST)
ಮಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಪಕ್ಷ  ನಡೆಸುತ್ತಿರುವ ಭಾರತ್ ಬಂದ್ ಗೆ ಇದೀಗ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ವಿರೋಧ ವ್ಯಕ್ತಪಡಿಸಿದ್ದಾರೆ. 


ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರು ಭಾರತ್ ಬಂದ್ ಗೆ ಕರೆ ಕೊಡುವುದು ಈ ದೇಶಕ್ಕೆ ವಿರೋಧ ಎಂದು ಹೇಳಿದ್ದಾರೆ. ಬಂದ್  ಗೆ  ಯಾವ  ಪಕ್ಷ ಕರೆ ನೀಡುತ್ತದೆಯೋ ಅವರು ನಷ್ಟವನ್ನು ಭರಿಸಬೇಕು ಎಂದು ಈಗಾಗಲೇ ಸುಪ್ರೀಂ ಕೋರ್ಟ್ ಹೇಳಿದೆ.  ಹಾಗಾಗಿ ಬಂದ್ ಗೆ ಕರೆ ಕೊಡುವವರು ಬಹಳ ಜಾಗೃತೆಯಿಂದ ಇರಬೇಕು ಎಂದಿದ್ದಾರೆ. 


ನಾಳೆ ಕೇಸ್ ಮಾಡಿದರೆ ಅದರಿಂದ ಪಾರಾಗಲು ಯಾರಿಂದಲೂ ಸಾಧ್ಯವಿಲ್ಲ. ಕರೆ ಕೊಟ್ಟ ನಂತರ ದೇಶದಲ್ಲಿ ಆಗುವ ಸಾವಿರಾರು ಕೋಟಿ ನಷ್ಟಕ್ಕೆ ಪಕ್ಷ ಹಾಗೂ ಬಂದ್ ಗೆ ಕರೆ ನೀಡಿದವರೇ ಹೊಣೆಯಾಗಬೇಕಾಗುತ್ತದೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಪೂಜಾರಿಯೇ ಇರಲಿ ಬಂದ್ ಗೆ ಕರೆ ನೀಡುವುದು ತಪ್ಪು ಎಂದು ಅವರು ತಿಳಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಟ್ಸಪ್ ನಲ್ಲಿ ವಿಚಾರಣೆ! ಇದೇನು ಜೋಕ್ ಮಾಡ್ತಿದ್ದೀರಾ ಎಂದ ಸುಪ್ರೀಂಕೋರ್ಟ್