ಮಂಗಳೂರು : ಮಂಗಳೂರಿನ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ದಂದೆ ನಡೆಸುತ್ತಿದ್ದ ದಲ್ಲಾಳಿಯೊರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕೊಡಗು ಜಿಲ್ಲೆ ವಿರಾಜಪೇಟೆಯ ದೀಪಕ್(43) ಎಂಬುದಾಗಿ ತಿಳಿದುಬಂದಿದೆ. ಇತನ ಜೊತೆಗಿದ್ದ ಇನ್ನು ಮೂವರು ದಲ್ಲಾಳಿಗಳಾದ ನಸೀರ್ ಉಪ್ಪಿನಂಗಡಿ, ನಸೀರ್ ಆಡ್ಯಾರ್ ಪದವು ಮತ್ತು ಜೀವನ್ ಪೂಜಾರಿ ಎಂಬುವರು ತಲೆಮರೆಸಿಕೊಂಡಿದ್ದಾರೆ.
ಇವರು ಈ ಸಿಟಿ ಲಾಡ್ಜ್ನಲ್ಲಿ ಯುವತಿಯರನ್ನು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೇ ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿದ್ದ ಮೂವರು ಯುವತಿಯರನ್ನು ಇದೀಗ ಪೊಲೀಸರು ರಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.