Publish Date: Wed, 29 Jun 2022 (11:22 IST)
Updated Date: Wed, 29 Jun 2022 (10:23 IST)
ನವದೆಹಲಿ : ಅರ್ಜೆಂಟ್ ಆಗಿ ಮೊಬೈಲ್ ಕೊಳ್ಳುವ ಯೋಜನೆಯಲ್ಲಿ ನೀವಿದ್ದರೆ, ಈ ಪ್ಲ್ಯಾನ್ ಅನ್ನು ಸ್ವಲ್ಪ ದಿನಗಳ ವರೆಗೆ ಮುಂದೂಡುವುದು ನಿಮಗೂ ನಿಮ್ಮ ಜೇಬಿಗೂ ಒಳಿತಾಗುವ ಸಾಧ್ಯತೆ ಇದೆ.
ಹಣಕಾಸು ವರ್ಷದ 2ನೇ ಅರ್ಧದಲ್ಲಿ ಮೊಬೈಲ್ಗಳ ಬೆಲೆ ಭಾರೀ ಕುಸಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಮಾರ್ಟ್ ಫೋನ್ ಕಂಪನಿಗಳು ಈಗಾಗಲೇ ಭಾರೀ ಪ್ರಮಾಣದಲ್ಲಿ ಮೊಬೈಲ್ಗಳ ಸ್ಟಾಕ್ಗಳನ್ನು ಇಟ್ಟುಕೊಂಡಿದ್ದು, ಮಾರಾಟವಾಗದೇ ಹಾಗೆಯೇ ಉಳಿದುಹೋಗುವ ಭೀತಿಯಲ್ಲಿವೆ.
ಇನ್ನೇನು ಹಬ್ಬದ ಸೀಸನ್ ಹತ್ತಿರದಲ್ಲಿದ್ದು, ಇದರ ರಿಯಾತಿಯಿಯೊಂದಿಗೆ ಕಂಪನಿಗಳು ಸ್ಟಾಕ್ಗಳನ್ನು ಖಾಲಿ ಮಾಡಲು ಬೆಲೆಯನ್ನು ಕಡಿತಗೊಳಿಸುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.