Publish Date: Wed, 22 Jun 2022 (20:07 IST)
Updated Date: Wed, 22 Jun 2022 (20:16 IST)
ನೂರು ರೂ. ದಾಟಿದ್ದ ಟೊಮೆಟೊ ದರ ಇದೀಗ ಅರ್ಧದಷ್ಟು ಇಳಿಕೆಯಾಗಿದೆ. ಕಳೆದ ತಿಂಗಳು ಜನ ಟೊಮೇಟೊ ದರ ಕೇಳಿದರೆ ಸಾಕು ಬೆಚ್ಚಿ ಬೀಳುತ್ತಿದ್ದರು. ಒಂದು ಹಂತದಲ್ಲಿ ಈ ಹಣ್ಣಿನ ದರ 5 ರಿಂದ 10 ರೂ.ವರೆಗೆ ಇಳಿಕೆಯಾಗಿತ್ತು. ನಂತರ ಮತ್ತೆ 100 ರೂ. ದಾಟಿದ್ದ ಟೊಮೇಟೊ ಇದೀಗ ಮತ್ತೆ ಇಳಿಕೆಯಾಗಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಟೊಮೆಟೊ ಯಥೇಚ್ಛವಾಗಿ ಬರುತ್ತಿದೆ. ಕಳೆದ ತಿಂಗಳು ಅಕಾಲಿಕ ಮಳೆಯಿಂದಾಗಿ ಬೆಳೆ ಬಂದರೂ ಮಳೆಗೆ ಸಿಲುಕಿ ಹಾಳಾಗಿತ್ತು. ಹೀಗಾಗಿ ಮಾರುಕಟ್ಟೆಗೆ ಬರುವ ಟೊಮೆಟೊ ಪೂರೈಕೆಯಲ್ಲಿ ಶೇ.40- 50 ರಷ್ಟು ಕುಸಿದಿತ್ತು. ಈಗ ನಾಟಿ ಮತ್ತು ಫಾರಂ ಟೊಮೆಟೊ ಹಣ್ಣು ಕೆ.ಜಿ.ಗೆ 50 ರೂ., ಕೆಲವೆಡೆ 40 ರೂ.ಗೆ ಮಾರಾಟವಾಗುತ್ತಿದೆ.
geetha
Publish Date: Wed, 22 Jun 2022 (20:07 IST)
Updated Date: Wed, 22 Jun 2022 (20:16 IST)