ತಿರುವನಂತಪುರಂ : ಬೀದಿ ನಾಯಿಗಳ ದಾಳಿಯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಕ್ರೋಧೋನ್ಮತ್ತ ಮತ್ತು ಹಿಂಸಾತ್ಮಕ ನಾಯಿಗಳನ್ನು ಕೊಲ್ಲಲು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ನಿಂದ ಅನುಮತಿ ಪಡೆಯಲು ನಿರ್ಧರಿಸಿದೆ.
ಕೇರಳದಲ್ಲಿ ದಿನೇ ದಿನೇ ಬೀದಿ ನಾಯಿಗಳು ಜನರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಗಟ್ಟಲು ಕೇರಳ ಸರ್ಕಾರ ದಾಳಿ ನಡೆಸುವಂತಹ ನಾಯಿಗಳನ್ನು ಕೊಲ್ಲಲು ಸುಪ್ರೀಂ ಕೋರ್ಟ್ನ ಅನುಮತಿ ಕೇಳಲು ನಿರ್ಧರಿಸಿದೆ.
ಮಾತ್ರವಲ್ಲದೇ ನಾಯಿಗಳ ಹಾವಳಿಯನ್ನು ತಡೆಯಲು ಸೆಪ್ಟೆಂಬರ್ 20 ರಿಂದ 1 ತಿಂಗಳ ಕಾಲ ಅಭಿಯಾನವನ್ನು ನಡೆಸಲು ಯೋಜಿಸಿದೆ.