Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಸಿಬಿ ರದ್ದು ಆದೇಶ ಕುರಿತು ಸುಪ್ರೀಂನಲ್ಲಿ ಅರ್ಜಿ

ಎಸಿಬಿ ರದ್ದು ಆದೇಶ ಕುರಿತು ಸುಪ್ರೀಂನಲ್ಲಿ ಅರ್ಜಿ
ನವದೆಹಲಿ , ಮಂಗಳವಾರ, 30 ಆಗಸ್ಟ್ 2022 (12:58 IST)
ನವದೆಹಲಿ : ಭ್ರಷ್ಟಾಚಾರ ನಿಗ್ರಹ ದಳವನ್ನು(ಎಸಿಬಿ) ರದ್ದುಗೊಳಿಸಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಖಾಸಗಿ ಅರ್ಜಿ ಸಲ್ಲಿಸಲಾಗಿದೆ.

ಕನಕರಾಜು ಎಂಬವರು ಖಾಸಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡಲು ಮುಖ್ಯ ನ್ಯಾಯಧೀಶ ರಮಣ ಸೂಚಿಸಿದ್ದಾರೆ.

ಇಬ್ಬರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಲಂಚ ಕೇಳಿದ್ದ ಆರೋಪ ಮಾಡಿ ಕನಕರಾಜು ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಯುತ್ತಿದ್ದಾಗ ಎಸಿಬಿಯನ್ನು ರದ್ದುಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಎಸಿಬಿ ರದ್ದು ಮಾಡಿರುವುದು ತಪ್ಪು.

ಕೇಸುಗಳ ತನಿಖೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.  


Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿನ ದರ ಹೆಚ್ಚಿಸಲು ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ