Publish Date: Sat, 05 Feb 2022 (06:11 IST)
Updated Date: Sat, 05 Feb 2022 (08:17 IST)
ನವದೆಹಲಿ : ಅಂಗನವಾಡಿ ಕೇಂದ್ರಗಳ ಸಮಸ್ಯೆಗಳ ಬಗ್ಗೆ ಇಂದು ಮಂಡ್ಯ ಲೋಕಸಭೆ ಸಂಸದೆ ಸುಮಲತಾ ಅಂಬರೀಶ್ ಲೋಕಸಭೆ ಕಲಾಪದ ವೇಳೆ ಗಮನ ಸೆಳೆದಿದ್ದಾರೆ.
ಅಂಗನವಾಡಿ ಕೇಂದ್ರಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳು ಸಮಸ್ಯೆಯಾಗಿದೆ. ಸಾಮಗ್ರಿಗಳ ದಾಸ್ತನಿಗೆ ತೊಂದರೆಯಾಗುತ್ತಿದೆ. ಗುಣಮಟ್ಟದ ಆಹಾರದ ಸಮಸ್ಯೆಯೂ ಇದೆ. ಹೀಗಾಗಿ ಅಂಗನವಾಡಿ ಮೂಲ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂದು ಪ್ರಶ್ನಿಸಿದರು.
ಅಂಗನವಾಡಿಯಲ್ಲಿ ಮೂಲ ಸೌಕರ್ಯಗಳ ವಿಷಯದಲ್ಲಿ ಕೊರತೆ ಮತ್ತು ಸಮಸ್ಯೆ ಇರುವುದು ನಿಜ. ಅಂಗನವಾಡಿ ಆರಂಭವಾದಗಿನಿಂದ ಈ ಸಮಸ್ಯೆಗಳು ಕಂಡು ಬರುತ್ತಿದೆ. ನಮ್ಮ ಸರ್ಕಾರದ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತಿದೆ ಎಂದು ಉತ್ತರಿಸಿದರು.