Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅವಿವಾಹಿತ ಮಹಿಳೆಯರ ಫೋಟೋಗಳನ್ನು ತೆಗೆದು ಲಕ್ಷಾಂತರ ಹಣ ನೀಡುವಂತೆ ಬೆದರಿಕೆ

ಅವಿವಾಹಿತ ಮಹಿಳೆಯರ  ಫೋಟೋಗಳನ್ನು ತೆಗೆದು ಲಕ್ಷಾಂತರ ಹಣ ನೀಡುವಂತೆ ಬೆದರಿಕೆ
bangalore , ಶುಕ್ರವಾರ, 4 ಫೆಬ್ರವರಿ 2022 (20:56 IST)
ಅವಿವಾಹಿತ ಮಹಿಳೆಯರನ್ನು ಸಾಮಾಜಿಕ ಜಾಲತಾಣದ ಮುಖಾಂತರ ಪರಿಚಯ ಮಾಡಿಕೊಂಡು ಅವರ ಅನುಮತಿಯಿಲ್ಲದೆ ಖಾಸಗಿ ಫೋಟೋಗಳನ್ನು ತೆಗೆದು ಲಕ್ಷಾಂತರ ಹಣ ನೀಡುವಂತೆ ಬೆದರಿಕೆ ಹಾಕುತ್ತಿದ್ದ ಚತ್ತೀಸ್ಘಡ ರಾಜ್ಯದ ಆರೋಪಿಯನ್ನು ಕೊಡಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಭಿಷೇಕ್ ಅಲಿಯಾಸ್ ಸುಶಾಂತ್ ಜೈನ್ (33) ಬಂಧಿತ ಆರೋಪಿ. ಈತನಿಂದ 3 ಮೊಬೈಲ್ ಹಾಗೂ 3.60 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಈತ ಸಾಫ್ಟ್ವೇರ್ ಕಂಪೆನಿಯೊಂದನ್ನು ತೆರೆಯಲು ತಯಾರಿ ಮಾಡಿಕೊಳ್ಳುತ್ತಿದ್ದನು. ಆರೋಪಿ ಅಭಿಷೇಕ್ಗೆ ವಿವಾಹವಾಗಿ ಪತ್ನಿ, ಮಕ್ಕಳಿದ್ದರೂ ಸಹ ಟೆಂಡರ್ ಎಂಬ ಆಯಪ್ ಮುಖಾಂತರ ಅವಿವಾಹಿತ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅವರನ್ನು ಪುಸಲಾಯಿಸಿ ವಿಶ್ವಾಸಗಳಿಸುತ್ತಿದ್ದನು.
 
ಡೇಟಿಂಗ್ ಮಾಡುವ ಮತ್ತು ಅವರ ಖಾಸಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುವ ಪ್ರವೃತ್ತಿ ಉಳ್ಳವನಾಗಿರುತ್ತಾನೆ.
ಕೊಡಿಗೆಹಳ್ಳಿಯಲ್ಲಿ ಅವಿವಾಹಿತ ಮಹಿಳೆಯನ್ನು ಟೆಂಡರ್ ಆಫ್ ಮೂಲಕ ಪರಿಚಯ ಮಾಡಿಕೊಂಡು ಅವರ ಮೊಬೈಲ್ ನಂಬರ್ ಪಡೆದುಕೊಂಡು ಅವರಿಗೆ ಫೋನ್ಕಾಲ್ ಮತ್ತು ಮೆಸೇಜ್ ಮಾಡಿ ಪುಸಲಾಯಿಸಿದ್ದಾನೆ.
 
ಫೆ.1ರಂದು ಬೆಳಗ್ಗೆ ಆರೋಪಿ ಅಭಿಷೇಕ್ ಮಹಿಳೆ ಮನೆಗೆ ಹೋಗಿ ಬಲವಂತವಾಗಿ ಅವರನ್ನು ವಿವಸ್ತ್ರಗೊಳಿಸಿ ಅನುಮತಿಯಿಲ್ಲದೆ ಅವರ ಖಾಸಗಿ ಫೋಟೋಗಳನ್ನು ತನ್ನ ಮೊಬೈಲ್ನಲ್ಲಿ ತೆಗೆದುಕೊಂಡು ಹೋಗಿದ್ದನು. ತದನಂತರ ಈ ಮಹಿಳೆಗೆ ಕರೆ ಮಾಡಿ ಲಕ್ಷಾಂತರ ರೂ. ಹಣ ನೀಡುವಂತೆ ಕೇಳಿದ್ದಾನೆ. ಹಣ ಕೊಡದಿದ್ದರೆ ನಿಮ್ಮ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೆಬ್ರವರಿ 12,13ರಂದು ಬೆಂಗಳೂರಿನಲ್ಲಿ ಐಪಿಎಲ್ ಆಟಗಾರರ ಹರಾಜು