Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಸ್​ಎಸ್​ಎಲ್​ಸಿ ಪೂರಕ ಫಲಿತಾಂಶ ಪ್ರಕಟ

ಎಸ್​ಎಸ್​ಎಲ್​ಸಿ ಪೂರಕ ಫಲಿತಾಂಶ ಪ್ರಕಟ
ಬೆಂಗಳೂರು , ಸೋಮವಾರ, 11 ಅಕ್ಟೋಬರ್ 2021 (13:03 IST)
ಬೆಂಗಳೂರು(ಅ.11) :  ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಇಂದು  ಪ್ರಕಟವಾಗಿದ್ದು, ಶೇ. 55.54 % ರಷ್ಟು  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್,  ಇಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 2 ದಿನಗಳ ಕಾಲ ಪರೀಕ್ಷೆ ನಡೆದಿತ್ತು. ಶಿಕ್ಷಣ ಇಲಾಖೆಯು ಕೊರೋನಾ ಕಾರಣದಿಂದ ಪರೀಕ್ಷೆಯಲ್ಲಿ ಬದಲಾವಣೆ ಮಾಡಿಕೊಂಡಿತ್ತು.
ರಾಜ್ಯದಲ್ಲಿ 53,155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಫಲಿತಾಂಶ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಧ್ಯಾಹ್ನ ಎಸ್ಎಂಎಸ್ ಮೂಲಕ ರವಾನೆಯಾಗಲಿದೆ.  ಮಧ್ಯಾಹ್ನ ಮೂರು ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು  https://sslc.Karnataka.gov.inನಲ್ಲಿ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಹೊಸ ವಿದ್ಯಾರ್ಥಿಗಳು 18 ಸಾವಿರದ 417 ವಿದ್ಯಾರ್ಥಿಗಳಲ್ಲಿ 9182 ಜನ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪುನರಾವರ್ತಿತ ಶಾಲಾ ಅಭ್ಯರ್ಥಿಗಳು 23 ಸಾವಿರ 334ರಲ್ಲಿ 13 ಸಾವಿರದ 866 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹೊಸ ಖಾಸಗಿ ಅಭ್ಯರ್ಥಿಗಳು- 295 ವಿದ್ಯಾರ್ಥಿಗಳಲ್ಲಿ 113  ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ ಖಾಸಗಿ ಅಭ್ಯರ್ಥಿಗಳು- 78 ಸಾವಿರದ 57 ವಿದ್ಯಾರ್ಥಿಗಳಲ್ಲಿ 4 ಸಾವಿರದ 288 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಚೀನಾ ಗಡಿ ಬಿಕ್ಕಟ್ಟು; ಕಮಾಂಡರ್ಗಳಿಂದ 13ನೇ ಸುತ್ತಿನ ಮಾತುಕತೆ