Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ, ಅ.10 : ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡಿದ್ದು, ಸೋಂಕು ಹರಡುವಿಕೆಯೂ ಆರೋಗ್ಯ ವ್ಯವಸ್ಥೆಯನಿಯಂತ್ರಣದಲ್ಲಿದೆ.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಇಂದು ಬೆಳಗ್ಗೆ ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 18,166 ಮಂದಿಗೆ ಸೋಂಕು ತಗುಲಿದೆ.
ಈ ಮೂಲಕ ದೇಶದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3,39,53,475ರಷ್ಟಾಗಿದೆ. ಅದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,30,971ರಷ್ಟಿದ್ದು, ಅದರ ಪ್ರಮಾಣ ಶೇ.0.68ರಷ್ಟು. 208ದಿನಗಳ ಬಳಿಕ ಇದು ಅತಿ ಅತಿ ಕಡಿಮೆ ಎಂದು ಉಲ್ಲೇಖಿಸಲಾಗಿದೆ. 2020ರ ಮಾರ್ಚ್ ನಂತರ ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರೀ ಇಳಿಕೆ ಕಂಡಿದೆ.
ಒಂದೇ ದಿನ ಸೋಂಕಿನಲ್ಲಿ 5,672 ಕುಸಿತ ಕಂಡಿದೆ. ಕಳೆದ 16 ದಿನಗಳಿಂದಲೂ ಕೊರೊನಾ ಸೋಂಕು 30 ಸಾವಿರದ ಒಳಗೆ ದಾಖಲಾಗುತ್ತಿದೆ, ಅದು ಮತ್ತಷ್ಟು ಮುಂದುವರೆದಿರುವುದು ದೇಶದ ಜನರಲ್ಲಿ ನೆಮ್ಮದಿ ತಂದಿದೆ.ನಿನ್ನೆ 12,83,212 ಮಂದಿಯನ್ನು ಪರೀಕ್ಷೆ ಒಳಪಡಿಸಲಾಗಿದೆ. ದೈನಂದಿನ ಸೋಂಕಿನ ಪ್ರಮಾಣ ಶೇ.1.42ರಷ್ಟಿದ್ದು, ಕಳೆದ 14 ದಿನಗಳ ಮೊದಲು ಶೇ.3ಕ್ಕಿಂತ ಹೆಚ್ಚಿದ್ದ ಸೋಂಕು ಈಗ ಗಣನೀಯವಾಗಿ ಕುಸಿದಿದೆ.