ಬೆಂಗಳೂರು : ಡಿಜಿಟಲ್ ಯುಗದಲ್ಲಿ ಏನ್ ಇಲ್ಲ ಅಂದ್ರೂ ನಡೆಯುತ್ತೆ. ಆದರೆ ಕೈಯಲ್ಲಿ ಒಂದು ಫೋನ್ ಇರಲೇಬೇಕು. ಹಳ್ಳಿಯಿಂದ ಡೆಲ್ಲಿವರೆಗೆ ಸಹ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇದೆ.
ಇದರಿಂದ ಎಷ್ಟು ಲಾಭವೋ ಅಷ್ಟೇ ಅಪಾಯವು ಇದೆ. ಜನ ವಂಚನೆಗೆ ಒಳಗಾಗುತ್ತಿರುವ ಘಟನೆಯು ಹೆಚ್ಚಾಗುತ್ತಿದೆ. ಇದೀಗ ಸ್ಮಾರ್ಟ್ ಫೋನ್ಗೆ ಹೊಸ ವೈರಸ್ ಒಂದು ಲಗ್ಗೆ ಇಟ್ಟಿದೆ.
ಸೈಬರ್ ಕ್ರೈಮ್ ಬಗ್ಗೆ ಸಾರ್ವಜನಿಕರಿಗೆ ಅಷ್ಟಾಗಿ ಮಾಹಿತಿ ಇರಲ್ಲ. ಅದರಲ್ಲೂ ಮೊಬೈಲ್ನಲ್ಲಿರೋ ಡೇಟಾ, ಬ್ಯಾಂಕ್ ಡಿಟೈಲ್ಸ್ ಸೇರಿದಂತೆ ಫೋಟೋ, ವೀಡಿಯೋ ಕದಿಯಬಲ್ಲ ವೈರಸ್ ಒಂದು ನಮ್ಮ ದೇಶಕ್ಕೆ ಕಾಲಿಟ್ಟಿದೆ.