Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಫೇಲ್ ಡೀಲ್ ಬಗ್ಗೆ ಸಿದ್ದರಾಮಯ್ಯ ಕೇಂದ್ರವನ್ನು ಟೀಕಿಸಿದ್ದು ಹೀಗೆ!

ರಫೇಲ್ ಡೀಲ್ ಬಗ್ಗೆ ಸಿದ್ದರಾಮಯ್ಯ ಕೇಂದ್ರವನ್ನು ಟೀಕಿಸಿದ್ದು ಹೀಗೆ!
ಬೆಂಗಳೂರು , ಭಾನುವಾರ, 23 ಸೆಪ್ಟಂಬರ್ 2018 (09:53 IST)
ಬೆಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ಇದೀಗ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡಾ ಧ್ವನಿಗೂಡಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಕಳೆದ ಕೆಲವು ತಿಂಗಳಿನಿಂದ ರಾಹುಲ್ ಗಾಂಧಿ ರಫೇಲ್ ಡೀಲ್ ವಿಚಾರವಾಗಿ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಇದೀಗ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಬಿಜೆಪಿಯ ಅಜೆಂಡಾ ಏನು? ರಿಲಯನ್ಸ್ ಸಂಸ್ಥೆಗೆ ಏನೂ ಅನುಭವವಿಲ್ಲದಿದ್ದರೂ ರಫೇಲ್ ಡೀಲ್ ಮಾಡಿ ಕೊಡುವ ಮೂಲಕ ನರೇಂದ್ರ ಮೋದಿ ಫ್ರಾನ್ಸ್ ಜತೆಗೆ ತೆರೆಮರೆಯ ಒಪ್ಪಂದ ನಡೆಸಿದ್ದಾರೆ. ಇದು ನಮ್ಮ ರಾಜ್ಯಗಳ ಕಂಪನಿಗಳು ಮತ್ತು ಸೈನಿಕರ ಮನೋಸ್ಥೈರ್ಯ ಕೆಡವಿದಂತೆ. ರಫೇಲ್ ಹಗರಣದಿಂದಾಗಿ ಸೈನಿಕರ ಜೀವಕ್ಕೆ ಅಪಾಯ ಎದುರಾಗಿದೆ ಮತ್ತು ಭ್ರಷ್ಟಾಚಾರದ ಭಯ ಕಾಡಿದೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಜತೆಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕರ್ನಾಟಕ ಬಿಜೆಪಿಯಿಂದಾಗಿ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮತ್ತು ಕರ್ನಾಟಕದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂದೂ ಆರೋಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಎಷ್ಟು ದೇವಸ್ಥಾನ ಸುತ್ತಿದ್ರೂ ಅವರಲ್ಲಿರುವ ಕೆಟ್ಟ ಮನಸ್ಸು ಕಾಣೆಯಾಗಿಲ್ವಲ್ಲ? ಸಿಎಂ ಎಚ್ ಡಿಕೆಗೆ ಅರವಿಂದ ಲಿಂಬಾವಳಿ ಟಾಂಗ್