Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಸ್ವಪಕ್ಷದ ಸಚಿವರಾದ ವಿನಯ್ ಕುಲಕರ್ಣಿ ಹಾಗು ಎಂ.ಬಿ.ಪಾಟೇಲ್ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮರೊಂದಿಗೆ ಮಾತನಾಡಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು,’ಕುಲಕರ್ಣಿ ಬಾಳ ದೊಡ್ಡೋನಾಗ್ಯಾನಾ. ಡೈರಿ ಫಾರಂ ಮಾಡ್ಕೊಂಡು ದೊಡ್ಡೋನಾಗ್ಯಾನಾ. ನಾನಿಲ್ದೇ ಧಾರವಾಡ ಪೇಡ ಈಚೆ ಬರೊಲ್ಲ ಅನ್ನಂಗಾಗ್ಯಾನ. ಸಚಿವ ಸಂಪುಟ ಸಭೆಯಲ್ಲಿ ಎಲ್ಲವೂ ಚರ್ಚೆಗೆ ಬರ್ತವೆ, ಅಲ್ಲಿ ಮಾತಾಡ್ತೀನಿ. ರಾಜೀನಾಮೆ ಪ್ರಸ್ತಾಪವೆಲ್ಲಾ ಮಾಧ್ಯಮ ಸೃಷ್ಟಿ. ಇದರ ಹಿಂದೆ ವಿನಯ್ ಕುಲಕರ್ಣಿ ಹಾಗು ಎಂ.ಬಿ.ಪಾಟೇಲ್ ಇದ್ದಾರೆ. ಸಂಪುಟದಲ್ಲಿ ಏನು ತೀರ್ಮಾನ ಆಗುತ್ತೋ ಆಗಲಿ. ದಿಢೀರ್ ಶ್ರೀಮಂತರಾದ್ರೆ ಹೀಗೆ ಆಗೋದು. ಸಚಿವ ಎಂ.ಬಿ.ಪಾಟೇಲ್ ಕಥೆನೂ ಅದೇ’ ಎಂದು ಸ್ವಪಕ್ಷದ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ