Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕೋಲ್ಕೊತ್ತಾ: ವಿರಾಟ್ ಕೊಹ್ಲಿ ಎಂದರೆ ಚಿಕ್ಕಮಕ್ಕಳಿಗೂ ಪಂಚ ಪ್ರಾಣ. ಇಂತಿಪ್ಪ ಕೊಹ್ಲಿ ಪರೀಕ್ಷೆ ಪತ್ರಿಕೆಯಲ್ಲೂ ಬಂದರೆ? ಪಶ್ಚಿಮ ಬಂಗಾಲದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೆಯೇ ಆಗಿದೆ.
10 ನೇ ತರಗತಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ನೋಡಿದ ವಿದ್ಯಾರ್ಥಿಗಳಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಯಾಕೆಂದರೆ ಪ್ರಶ್ನೆಯೊಂದು ತಾವು ಆರಾಧಿಸುವ ತಮ್ಮ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಗ್ಗೆ ಕೇಳಲಾಗಿತ್ತು.
ವಿರಾಟ್ ಕೊಹ್ಲಿಯನ್ನು ಆರಾಧಿಸುವ ಹುಡುಗರಿಗೆ ಅವರ ಜೀವನದ ಬಗ್ಗೆ ಚುಟುಕಾಗಿ ಪ್ರಬಂಧ ಬರೆಯಲು ಹೇಳಿದೆ ಹೇಗಾಗಬೇಡ? ವಿದ್ಯಾರ್ಥಿಗಳೆಲ್ಲಾ ಯಾವ ಪ್ರಶ್ನೆಗೆ ಉತ್ತರಿಸಿದ್ದಾರೋ ಬಿಟ್ಟರೋ ಗೊತ್ತಿಲ್ಲ. ಆದರೆ ಈ ಪ್ರಶ್ನೆಗೆ ಎಲ್ಲರೂ ಫುಲ್ ಮಾರ್ಕ್ ಪಡೆಯುವುದು ಗ್ಯಾರಂಟಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ