ನವದೆಹಲಿ: ಕೇರಳ ಮತ್ತು ಕೊಡಗಿನಲ್ಲಿ ಹಿಂದೆಂದೂ ಕಾಣದ ಮಳೆ, ನೆರೆ ಬರಲು ಕಾರಣವೇನು ಗೊತ್ತಾ? ಹವಾಮಾನ ತಜ್ಞರು ಇದೀಗ ಭಾರೀ ಪ್ರಮಾಣದ ಮಳೆಯ ಹಿಂದಿನ ನೈಜ ಕಾರಣ ಪತ್ತೆ ಹಚ್ಚಿದ್ದಾರೆ.
ಆಫ್ರಿಕಾದ ಮಡಗಾಂಸ್ಕರ್ ನಲ್ಲಿ ಸಂಭವಿಸಿದ ಚಂಡಮಾರುತ ‘ಸೊಮಾಲಿಯಾ ಜೆಟ್’, ಒಡಿಶಾದ ಬಂಗಾಳ ಕೊಲ್ಲಿಯ ತೀರದಲ್ಲಿ ವಾಯುಭಾರ ಕುಸಿತ ಮತ್ತು ಮುಂಗಾರು ಪ್ರವೇಶ ಜತೆಯಾಗಿ ಸಂಭವಿಸಿದ್ದರಿಂದ ಈ ರೀತಿಯಾಗಿ ಕೇರಳ, ಕೊಡಗಿನಲ್ಲಿ ಭಾರೀ ಮಳೆಗೆ ಕಾರಣವಾಯ್ತು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಹಲವು ಅಂಕಿ ಅಂಶಗಳನ್ನು, ವೈಜ್ಞಾನಿಕ ಲೆಕ್ಕಾಚಾರಗಳನ್ನು ಹಾಕಿಯೇ ಹವಾಮಾನ ತಜ್ಞರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ ಇದನ್ನು ಹವಾಮಾನ ಇಲಾಖೆ ಮೊದಲೇ ಗುರುತಿಸಲು ವಿಫಲವಾಗಿ ಈ ಪ್ರಕೃತಿ ವಿಕೋಪದಿಂದ ಅನಾಹುತಗಳು ಹೆಚ್ಚಾದವು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.