ಕೊಡಗು : ಜಿಲ್ಲೆಯ ಹಲವೆಡೆ ಇಂದು ಬೆಳಗ್ಗೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ.
ಬೆಳಗ್ಗೆ 7.45ರ ಸುಮಾರಿಗೆ ಮಡಿಕೇರಿ ತಾಲೂಕಿನ ಕರಿಕೆ, ಪೆರಾಜೆ, ಅರವತ್ತೊಕ್ಲು, ಸಂಪಾಜೆ ಮತ್ತು ಕಲ್ಲುಗುಂಡಿ ಗ್ರಾಮಗಳಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಮನೆಗಳ ಪಾತ್ರೆಗಳು ಕಿಟಕಿಗಳು ಅಲ್ಲಾಡಿದ ಅನುಭವಾಗಿದೆ.
ಅಲ್ಲದೇ ಭಾಗಮಂಡಲ ನಾಪೋಕ್ಲು ಕರ್ಣಗೇರಿಯಲ್ಲೂ ಭೂಮಿ ಕಂಪಿಸಿದೆ. ಸುಳ್ಯ ಪೇಟೆಯಲ್ಲೂ ಭೂಕಂಪನ ಅನುಭವವಾಗಿದ್ದು, ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು 4-5 ಸೆಕೆಂಡ್ಗಳ ಕಾಲ ಕಂಪನ ಆಗಿದೆ.
ಕೇವಲ ಒಂದು ವಾರದ ಅಂತರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಇದೀಗ ಈ ಘಟನೆ ಜನರಲ್ಲಿ ಆತಂಕ ಮೂಡಿಸಿದೆ.