Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮೈಸೂರು: ಪತ್ನಿಯ ಶೀಲ ಶಂಕಿಸಿ ಪತಿಯೇ ಆಕೆಯ ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮೊದಲ ಪತ್ನಿಯ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿ ಜೈಲು ಪಾಲಾಗಿದ್ದ. ಇದೀಗ ಎರಡನೇ ಪತ್ನಿ ಕೊಲೆ ಮಾಡಿದ್ದಾನೆ.
ಎರಡನೇ ವಿವಾಹವಾಗಿ ಮದುವೆಯಾಗಿ 21 ವರ್ಷಗಳಾಗಿದ್ದು 20 ವರ್ಷದ ಮಗಳೂ ಇದ್ದಾಳೆ. ಆದರೂ ಪತ್ನಿಯ ಶೀಲದ ಮೇಲೆ ಈತನಿಗೆ ಶಂಕೆ. ಹೀಗಾಗಿ ನಿತ್ಯವೂ ಜಗಳವಾಡುತ್ತಿದ್ದ. ಇದೀಗ ಕೊಲೆ ನಡೆಸಿ ತಲೆಮರೆಸಿಕೊಂಡಿದ್ದಾನೆ.