Publish Date: Mon, 26 Mar 2018 (12:13 IST)
Updated Date: Mon, 26 Mar 2018 (12:33 IST)
ಬೆಂಗಳೂರು : ‘4 ವರ್ಷದಿಂದ ಮಲಗಿದ್ದ ಸಿದ್ದರಾಮಯ್ಯ ಸರ್ಕಾರ ಈಗ ಎಚ್ಚೆತ್ತಂತೆ ವರ್ತಿಸ್ತಿದೆ ‘ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನ ಶಾಂತಿನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,’ಕಾಮಗಾರಿ ಮುಗಿಯದಿದ್ದರೂ ತರಾತುರಿಯಲ್ಲಿ ಚಾಲನೆ ನೀಡ್ತಿದ್ದಾರೆ. ಕಾಂಗ್ರೆಸ್ ನ ಎಲೆಕ್ಷನ್ ಗಿಮಿಕ್ ಅಂತಾ ಜನರಿಗೆ ಗೊತಾಗಲ್ವಾ. ರಾಹುಲ್ ಗಾಂಧಿಗೆ ಎನ್.ಸಿ.ಸಿ. ಅಂದ್ರೆ ಏನು ಅಂತಾ ಗೊತ್ತಿಲ್ಲ. ಕಡೇ ಪಕ್ಷ ಎಐಸಿಸಿ ಅಂದ್ರೆ ಗೊತ್ತಿದ್ಯೋ ಇಲ್ವೋ. ಹೆಚ್.ಡಿ.ಕೆ. ಹೇಳಿದಂತೆ ಬೆಂಗಳೂರು ಜನ ಕಾಂಗ್ರೆಸ್ ವಿರುದ್ಧ ಕೆಮ್ಮಿ ಆಗಿದೆ. ಹಾಗೆಂದು ಬಿಜೆಪಿ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲ್ಲ. ನಾವು 224 ಕ್ಷೇತ್ರಗಳಲ್ಲೂ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
pavithra
Publish Date: Mon, 26 Mar 2018 (12:13 IST)
Updated Date: Mon, 26 Mar 2018 (12:33 IST)