Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಥಿಯೇಟರ್ ಹೌಸ್‍ಫುಲ್‍ಗೆ ಅನುಮತಿ

ಥಿಯೇಟರ್  ಹೌಸ್‍ಫುಲ್‍ಗೆ ಅನುಮತಿ
ಬೆಂಗಳೂರು , ಶನಿವಾರ, 5 ಫೆಬ್ರವರಿ 2022 (06:37 IST)
ಬೆಂಗಳೂರು : ರಾಜ್ಯದ ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ರಾಜ್ಯ ಸರ್ಕಾರ ಹಲವು ಷರತ್ತಿನೊಂದಿಗೆ ಅವಕಾಶ ಮಾಡಿಕೊಟ್ಟಿದೆ.

ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಪ್ರಕಾರ ಥಿಯೇಟರ್ಗೆ ಆಗಮಿಸುವವರು 95 ಮಾಸ್ಕ್ಗಳನ್ನೇ ಧರಿಸಬೇಕು ಇಲ್ಲದಿದ್ದರೆ ಅಂತವರಿಗೆ ಅವಕಾಶ ಕೊಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

ಮಾರ್ಗಸೂಚಿಯ ಪ್ರಕಾರ ಚಿತ್ರಮಂದಿರಗಳಿಗೆ ಬರುವ ಸಿನಿಪ್ರಿಯರು ಎರಡು ಡೋಸ್ ಲಸಿಕೆ ಪಡೆದಿರಬೇಕು ಇಲ್ಲದಿದ್ದರೆ ಪ್ರವೇಶ ನಿಷೇಧಿಸಲಾಗಿದೆ. ಯಾವುದೇ ವ್ಯಕ್ತಿ ಥಿಯೇಟರ್, ಜಿಮ್ ಮತ್ತು ಈಜುಕೊಳ ಪ್ರವೇಶಿಸುವ ಮುನ್ನ ಕೋವಿಡ್ನ ಎರಡೂ ಡೋಸ್ ಲಸಿಕೆ ಪಡೆದಿರಬೇಕು.

ಕೋವಿಡ್ ಸ್ಥಿತಿಗತಿ, ಆಸ್ಪತ್ರೆ ದಾಖಲಾತಿ ಅವಲೋಕಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಜನವರಿ 15 ರಿಂದಲೇ ಈ ಮಾರ್ಗಸೂಚಿಯಲ್ಲಿ ಕೆಲ ರಿಯಾಯಿತಿಗಳನ್ನು ನೀಡಲು ಆರಂಭಿಸಲಾಗಿತ್ತು. ಚಿತ್ರಮಂದಿರ, ಜಿಮ್, ಯೋಗ ಕೇಂದ್ರ, ಸ್ವಿಮ್ಮಿಂಗ್ ಪೂಲ್ನಲ್ಲಿ 50% ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿಯಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆಯಲ್ಲಿ ದನಿ ಎತ್ತಿದ ಸುಮಲತಾ?