ನವದೆಹಲಿ : ದೆಹಲಿ, ಗುಜರಾತ್, ಉತ್ತರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ.
ನಿಯಂತ್ರಿಸಲು ಅಧಿಕಾರಿಗಳು ನಾನಾ ರೀತಿಯ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಕಠಿಣ ನಿಯಮಗಳಿಗೂ ಬಗ್ಗದ ಜನರಿಗೆ ಪೊಲೀಸರು ಹಾಗೂ ಅಧಿಕಾರಿಗಳು ದಂಡದ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.
ಕೊರೊನಾ ನಿಯಂತ್ರಿಸುವ ಸಲುವಾಗಿ ಈಗಾಗಲೇ ಬಹುತೇಕ ರಾಜ್ಯಗಳಲ್ಲಿ ಮಾಸ್ಕ್, ಸಾರ್ವಜನಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕ, ಚಂಡೀಗಢ ಮೊದಲಾದ ರಾಜ್ಯಗಳಲ್ಲೂ ಇಂದಿನಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗಿದೆ.
ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೆ, ಸಂಚಾರದ ವೇಳೆ ಉಗುಳುವುದು ಕಂಡು ಬಂದರೆ ಅಂಥವರಿಗೆ ದಂಡದ ಬಿಸಿ ಮುಟ್ಟಿಸುವಂತೆಯೂ ಸರ್ಕಾರ ಸೂಚನೆ ನೀಡಿದೆ. ಅದರಂತೆ ಹಲವು ರಾಜ್ಯಗಳು ಹಲವು ರೀತಿಯಲ್ಲಿ ದಂಡ ಶುಲ್ಕವನ್ನು ನಿಗದಿಮಾಡಿವೆ.
ನಿಯಮ ಉಲ್ಲಂಘಿಸುವವರಿಗೆ ಕರ್ನಾಟಕದಲ್ಲಿ ಪ್ರತಿ ಅಪರಾಧಕ್ಕೆ 250 ರೂ., ಗೋವಾದಲ್ಲಿ 200 ರೂ., ಆಂಧ್ರಪ್ರದೇಶದಲ್ಲಿ 100 ರೂ. ಇದ್ದರೆ, ಒಡಿಶಾ, ಗುಜರಾತ್, ಉತ್ತರಖಾಂಡ, ತಮಿಳುನಾಡು, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ 500 ರಿಂದ 5 ಸಾವಿರ ರೂ. ವರೆಗೂ ದಂಡದ ಮೊತ್ತವನ್ನು ನಿಗದಿ ಮಾಡಲಾಗಿದೆ. ಅದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.