Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಮಲಾ ಹ್ಯಾರಿಸ್ಗೆ ಕೋವಿಡ್ ಸೋಂಕು ದೃಢ

ಕಮಲಾ ಹ್ಯಾರಿಸ್ಗೆ ಕೋವಿಡ್ ಸೋಂಕು ದೃಢ
ವಾಷಿಂಗ್ಟನ್ , ಬುಧವಾರ, 27 ಏಪ್ರಿಲ್ 2022 (08:05 IST)
ವಾಷಿಂಗ್ಟನ್ : ಯುಎಸ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಗೆ ಯಾವುದೇ ರೋಗ ಲಕ್ಷಣಗಳಿಲ್ಲದೇ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಕಮಲಾ ಹ್ಯಾರಿಸ್ ಇಂದು ಕೋವಿಡ್ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿದ್ದು, ಪಾಸಿಟಿವ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೂ ಅವರು ತನ್ನ ಪ್ರತ್ಯೇಕ ನಿವಾಸದಲ್ಲಿ ವಾಸವಿದ್ದು, ದೂರದಿಂದಲೇ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ.

ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ನಂತರವೇ ಶ್ವೇತ ಭವನಕ್ಕೆ ಮರಳುತ್ತೇನೆ ಎಂದು ಅವರು ಹೇಳಿದ್ದಾರೆ. 

ಹ್ಯಾರಿಸ್(57) ಅಧಿಕಾರ ವಹಿಸಿಕೊಳ್ಳುವ ಕೆಲ ವಾರಗಳ ಮುನ್ನ ಮೊಡೆರ್ನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದರು. ಅಧಿಕಾರ ಪಡೆದ ನಂತರ 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದರು. 2021ರ ಅಕ್ಟೋಬರ್ ಅಂತ್ಯದಲ್ಲಿ ಬೂಸ್ಟರ್ ಡೋಸ್ ಮತ್ತು ಏಪ್ರಿಲ್ 1 ರಂದು ಹೆಚ್ಚುವರಿ ಬೂಸ್ಟರ್ ಅನ್ನು ಪಡೆದುಕೊಂಡಿದ್ದರು.

ಯುಎಸ್ ಅಧ್ಯಕ್ಷ ಜೋ ಬೈಡನ್ ಇತ್ತೀಚಿನ ದಿನಗಳಲ್ಲಿ ಹ್ಯಾರಿಸ್ನ ಹತ್ತಿರದ ಸಂಪರ್ಕದಲ್ಲಿದ್ದರು ಎಂದು ಶ್ವೇತಭವನ ಹೇಳಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಪ್ರಧಾನಿ ಮಹತ್ವ ʻಕೋವಿಡ್ʼ ಸಭೆ