Publish Date: Tue, 26 Apr 2022 (13:30 IST)
Updated Date: Tue, 26 Apr 2022 (13:20 IST)
ದೇಶದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಏಪ್ರಿಲ್ 27 ರಂದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಸಿಎಂ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ಕೊರೋನಾ ಪರೀಕ್ಷೆ ಹೆಚ್ಚಳ, ಮುಂಜಾಗ್ರತೆ ವಹಿಸುವಂತೆ ಮೋದಿ ಸೂಚಿಸುವ ಸಾಧ್ಯತೆ ಇದೆ. ದೆಹಲಿಯಲ್ಲಿ ಕೋವಿಡ್ ಸೋಂಕು ಸತತ ಏರಿಕೆಯಾಗಿದ್ದು, ಭಾನುವಾರ 1,083 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಈ ಮೂಲಕ ಪಾಸಿಟಿವಿಟಿ ದರವು ಶೇ. 4.48ಕ್ಕೆ ಏರಿಕೆಯಾಗಿದ್ದು, ಒಬ್ಬ ಸೋಂಕಿತ ಸಾವನ್ನಪ್ಪಿದ್ದಾನೆ. ದೆಹಲಿಯಲ್ಲಿ ಈವರೆಗೆ 18.74 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಾವಿನ ಸಂಖ್ಯೆ 26,168ಕ್ಕೆ ಏರಿಕೆಯಾಗಿದೆ. ಶನಿವಾರ 1,094 ಕೇಸು ದಾಖಲಾಗಿದ್ದು, ಇಬ್ಬರು ಸೋಂಕಿತರು ಬಲಿಯಾಗಿದ್ದರು.
Ramya kosira
Publish Date: Tue, 26 Apr 2022 (13:30 IST)
Updated Date: Tue, 26 Apr 2022 (13:20 IST)