ಹಿಮಾಲಯದ ತಪ್ಪಲಿನ ಪ್ರಮುಖ ನಾಲ್ಕು ತೀರ್ಥ ಕ್ಷೇತ್ರಗಳಾದ, 'ಚಾರ್ ಧಾಮ್' ಗಳೆಂದೇ ಜನಪ್ರಿಯವಾಗಿರುವ ಗಂಗೋತ್ರಿ, ಯಮುನೋತ್ರಿ, ಕೇದರ ನಾಥ ಮತ್ತು ಬದ್ರಿ ನಾಥ ದೇಗುಲಗಳಿಗೆ ವಾಡಿಕೆಯಂತೆ ಬಾಗಿಲು ಹಾಕಲಾಗುತ್ತಿದೆ.ಚಳಿಗಾಲ ಆಗಮಿಸುತ್ತಿದ್ದಂತೆಯೇ ಹಿಮಾಲಯ ಹಿಮದ ಹೊದಿಕೆ ಹೊದ್ದುಕೊಳ್ಳುವುದರಿಂದ ಈ ಯಾತ್ರಾ ಕ್ಷೇತ್ರಗಳು ಕೂಡ ಹಿಮ ಮಯವಾಗಲಿವೆ. ಹೀಗಾಗಿ ದೇಗುಲದ ಬಾಗಿಲನ್ನು ಹಾಕಲಾಗುತ್ತದೆ. ಭಕ್ತರಿಗೂ ದೇಗುಲ ಭೇಟಿಗೆ ಅವಕಾಶ ನೀಡಲಾಗುವುದಿಲ್ಲ.