Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಡುತ್ತಿರುವ ಓಮೈಕ್ರಾನ್!

ಇನ್ನಷ್ಟು ಆತಂಕಕ್ಕೆ ಎಡೆ ಮಾಡಿಕೊಡುತ್ತಿರುವ ಓಮೈಕ್ರಾನ್!
ಬೆಂಗಳೂರು , ಸೋಮವಾರ, 20 ಡಿಸೆಂಬರ್ 2021 (09:23 IST)
ಬೆಂಗಳೂರು : ಇಂದು ಮತ್ತೆ ಐದು ಹೊಸ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಮಾಹಿತಿಯನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
 
ಈ ಬಾರಿ ಬೆಂಗಳೂರು ಹೊರತಾಗಿ ರಾಜ್ಯದ  ಇತರೆ ಜಿಲ್ಲೆಗಳು ಓಮೈಕ್ರಾನ್ ಗೆ ವ್ಯಾಪಿಸಿದೆ. ಧಾರವಾಡದ  54 ವರ್ಷದ ಪುರುಷ, ಭದ್ರಾವತಿಯ  20 ವರ್ಷದ ಯುವತಿ, ಉಡುಪಿಯ  82 ವರ್ಷದ ವೃದ್ಧ, 73 ವರ್ಷದ ವೃದ್ಧ ದಂಪತಿ ಮತ್ತು ಮಂಗಳೂರಿನ  19 ವರ್ಷದ ಯುವತಿಯಲ್ಲಿ ಓಮೈಕ್ರಾನ್ ಸೋಂಕು ದೃಢಪಟ್ಟಿದೆ. ಸದ್ಯ ರಾಜ್ಯದಲ್ಲಿ ಓಮೈಕ್ರಾನ್ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಎರಡನೇ ಅಲೆಯಂತೆ ಮತ್ತೆ ವಾರ್ಡ್ ರೀತಿಯಲ್ಲಿ ವಿಂಗಡಿಸಿ ಕೊರೋನಾ ಮಟ್ಟಹಾಕಲು ಪ್ಲ್ಯಾನ್ ಮಾಡಿಕೊಂಡಿದೆ. ನಗರದ ಪ್ರಮುಖ 5 ವಾರ್ಡ್ ಗಳಲ್ಲಿ ಸರಾಸರಿ 7ಕ್ಕಿಂತ ಅಧಿಕ ಕೇಸ್ ಪ್ರತಿ ದಿನ ಪತ್ತೆಯಾಗುತ್ತಿವೆ  ಬೆಳ್ಳಂದೂರು ವಾರ್ಡ್, ದೊಡ್ಡನೆಕುಂಡಿ ವಾರ್ಡ್, ಬೇಗೂರು ವಾರ್ಡ್, ಹಗದೂರು ವಾರ್ಡ್, ಊSಖ ಲೇಔಟ್ ವಾರ್ಡ್ ನಲ್ಲಿ ಕೇಸ್ ಹೆಚ್ಚಳವಾಗಿದೆ.

ಈ ವಾರ್ಡ್ ಗಳಲ್ಲಿ ಪ್ರತಿ ದಿನ 7ಕ್ಕಿಂತ ಅಧಿಕ ಕೇಸ್ ಪತ್ತೆಯಾಗುತ್ತಿರುವ ಹಿನ್ನೆಲೆ  ರೆಡ್ ಝೋನ್ ಮಾಡಿ ಬಿಬಿಎಂಪಿ ಪ್ರದೇಶಗಳನ್ನು ಪರಿಶೀಲನೆ ನಡೆಸುತ್ತಿದೆ.ಆದ್ಯತೆ ಮೇರೆಗೆ ಈ ಐದು ವಾರ್ಡ್ ಸೇರಿದಂತೆ ಕೆಲ ವಾರ್ಡ್ ಗಳಲ್ಲಿ ಲಸಿಕೆ ಹಂಚಿಕೆ ಮಾಡಲಾಗಿದೆ. ಎರಡನೇ ಡೋಸ್ ಲಸಿಕೆ ಪೂರ್ವ ಪ್ರಮಾಣದಲ್ಲಿ ನೀಡಲು ಪಾಲಿಕೆ ಮುಂದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಡಳಿತ ಸಪ್ತಾಹ: ಇಂದು ದೇಶಾದ್ಯಂತ ಚಾಲನೆ