ಓಮೈಕ್ರಾನ್ ರೂಪಾಂತರಿ ವೈರಸ್ ಆತಂಕದ ಹಿನ್ನೆಲೆ ರಾಜ್ಯದಲ್ಲಿ ಶಾಲಾ-ಕಾಲೇಜು ಬಂದ್ ಆಗುತ್ತಾ ಅನ್ನೋ ಪ್ರಶ್ನೆಗೆ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಸಷ್ಟನೆ ನೀಡಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲಾ ಕಾಲೇಜು ಬಂದ್ ಇಲ್ಲ. ಎಂದಿನಂತೆ ಶಾಲಾ ಕಾಲೇಜು ತರಗತಿಗಳು ಮುಂದುವರಿಯುತ್ತವೆ. ವಿಧ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಯಾವುದೇ ಗೊಂದಲ ಬೇಡ ಮೂರನೇ ಅಲೆ ಹಾಗೂ ಒಮಿಕ್ರಾನ್ ವೈರಸ್ ಬಗ್ಗೆ ಮಾಹಿತಿ ಪಡೆಯಲಾಗಿದೆ. ಆರೋಗ್ಯ ತಜ್ಞರೊಂದಿಗೆ ಚರ್ಚೆ ಮಾಡಲಾಗಿದೆ ತಜ್ಞರೇ ಹೇಳುವಂತೆ ಫೆಬ್ರವರಿ ಅಂತ್ಯದಲ್ಲಿ ಮೂರನೇ ಅಲೆ ಎಂದಿದ್ದಾರೆ ಎಂದು ತಿಳಿಸಿದರು.
ಶಾಲಾ ಕಾಲೇಜುಗಳಲ್ಲಿ ವಿಶೇಷವಾದ SಔP ಜಾರಿ ಮಾಡಲಾಗಿದೆ. ಸ್ವಚ್ಚತೆ, ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ. ಮಾಸ್ಕ್ ಇಲ್ಲದಿದ್ರೆ ತರಗತಿಗಳಿಗೆ ಬರಲು ಅವಕಾಶ ಇಲ್ಲ. ಎಲ್ಲ ಪೋಷಕರು ಸಹ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕೆಂದು ಸೂಚಿಸಲಾಗಿದೆ.
ಹೀಗಾಗಿ ಪೋಷಕರಿಗೆ ಮನವಿ ಮಾಡಿ ಎರಡು ಡೋಸ್ ತೆಗೆದುಕೊಳ್ಳುವಂತೆ ತಿಳಿ ಹೇಳಲಾಗ್ತಿದೆ ಎಂದರು.
ಶಾಲಾ ಕಾಲೇಜು ಬಂದ್ ಬಗ್ಗೆ ಯಾವುದೇ ಗೊಂದಲ ಬೇಡ. ಧೈರ್ಯವಾಗಿ ಶಾಲಾ ಕಾಲೇಜು ಗಳಿಗೆ ಮಕ್ಕಳನ್ನ ಕಳುಹಿಸಿ. ನಿಮ್ಮ ಪರವಾಗಿ ಸರ್ಕಾರ ಹಾಗು ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ ಎಂದು ಪೋಷಕರಿಗೆ ಧೈರ್ಯ ಹೇಳಿದರು.