Publish Date: Sun, 19 Dec 2021 (09:14 IST)
Updated Date: Sun, 19 Dec 2021 (09:16 IST)
ಬೆಂಗಳೂರು : ರಾಜ್ಯದಲ್ಲಿ ನಿನ್ನೆ (ಡಿ.19) ಒಂದೇ ದಿನ ಹೊಸ ಆರು ಜನರಿಗೆ ಕೊರೊನಾ ರೂಪಾಂತರಿ ಒಮಿಕ್ರಾನ್ ಕಾಣಿಸಿಕೊಂಡಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಒಮಿಕ್ರಾನ್ ಆತಂಕ ಶುರುವಾಗಿದೆ.
ಕರ್ನಾಟಕದಲ್ಲಿ ಸದ್ಯ ಒಮಿಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐವರಿಗೆ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ನಿನ್ನೆ ದೃಢಪಟ್ಟಿದ ಆರು ಹೊಸ ಒಮಿಕ್ರಾನ್ ಸೋಂಕಿತರ ಹಿಸ್ಟರಿ ಇಲ್ಲಿದೆ.
ಆರು ಜನರ ಪೈಕಿ 18 ವರ್ಷದ ಒಂದು ಹುಡುಗಿಗೆ ಒಮಿಕ್ರಾನ್ ಇರುವುದು ದೃಢವಾಗಿದೆ. ಇದೇ 10ಕ್ಕೆ ಯುಕೆ ಇಂದ ಬೆಂಗಳೂರಿಗೆ ಪ್ರಯಾಣ ಮಾಡಿದ್ದು, ಕೊರೊನಾ ಟೆಸ್ಟ್ನಲ್ಲಿ ಪಾಸಿಟಿವ್ ಬಂದಿದೆ.
ಪಾಸಿಟಿವ್ ಬಂದ ಕೂಡಲೆ ಆ್ಯಂಬುಲೆನ್ಸ್ ಮೂಲಕ ಏರ್ಪೋರ್ಟ್ ಹಾಸ್ಪಿಟಲ್ಗೆ ಶಿಫ್ಟ್ ಮಾಡಲಾಗಿದೆ. 18 ವರ್ಷದ ಹುಡುಗಿಗೆ ಪ್ರಾಥಮಿಕ ಸಂಪರ್ಕದಲ್ಲಿ 3, ಸೆಕೆಂಡರಿ ಕಾಂಟ್ಯಾಕ್ಟ್ನಲ್ಲಿ 16 ಜನ ಇದ್ದಾರೆ ಎಂದು ತಿಳಿದುಬಂದಿದೆ.