Publish Date: Wed, 14 Oct 2026 (15:10 IST)
Updated Date: Wed, 14 Oct 2026 (14:26 IST)
ಆಗಾಗ್ಗೆ ಹೊಟ್ಟೆ ಉಬ್ಬರ ಉಂಟಾಗುತ್ತಿದ್ದರೆ, ಅದು ಕೇವಲ ಅಜೀರ್ಣವಲ್ಲ. ನಿಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಅಸಮತೋಲನದ ಸ್ಪಷ್ಟ ಸಂಕೇತವಾಗಿದೆ.
ಕರುಳಿನ ಆರೋಗ್ಯ ತಪ್ಪಿರುವುದನ್ನು ತಿಳಿಸುವ 5 ಪ್ರಮುಖ ಲಕ್ಷಣಗಳು:
ನಿರಂತರ ಅನಿಲ ಮತ್ತು ಉಬ್ಬರ: ಆಹಾರ ಸೇವಿಸಿದ ತಕ್ಷಣ ಹೊಟ್ಟೆ ಬಿಗಿಯಾಗುವುದು ಮತ್ತು ಗ್ಯಾಸ್ ತುಂಬಿಕೊಳ್ಳುವುದು.
ಸಿಹಿ ಪದಾರ್ಥಗಳ ಅತಿಯಾದ ಹಂಬಲ: ಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾದಾಗ ಸಕ್ಕರೆ ಮತ್ತು ಜಂಕ್ ಫುಡ್ ತಿನ್ನುವ ಆಸೆ ಹೆಚ್ಚುತ್ತದೆ.
ನಿಯಮಿತ ಮಲಬದ್ಧತೆ ಅಥವಾ ಭೇದಿ: ಕರುಳಿನಲ್ಲಿ ಕಸ ಶೇಖರಣೆಯಾಗಿ ಜೀರ್ಣಕ್ರಿಯೆಯ ಏರುಪೇರಾಗುವುದು.
ಚರ್ಮದ ಸಮಸ್ಯೆಗಳು: ಮೊಡವೆ, ಕಡಿತ ಅಥವಾ ತ್ವಚೆಯ ಮೇಲಿನ ದದ್ದುಗಳು ಕರುಳಿನ ತೊಂದರೆಯಿಂದಲೇ ಶುರುವಾಗುತ್ತವೆ.
ಆಯಾಸ ಮತ್ತು ನಿದ್ರಾಹೀನತೆ: ಶೇ.90 ಭಾಗದಷ್ಟು 'ಸೆರೊಟೋನಿನ್' (ಸಂತೋಷದ ಹಾರ್ಮೋನ್) ಕರುಳಿನಲ್ಲೇ ಉತ್ಪತ್ತಿಯಾಗುವುದರಿಂದ, ಮೂಡ್ ಸ್ವಿಂಗ್ಸ್ ಮತ್ತು ತೀವ್ರ ಆಯಾಸ ಉಂಟಾಗುತ್ತದೆ.
ಪರಿಹಾರ: ಪ್ರೊಬಯೋಟಿಕ್ ಆಹಾರಗಳಾದ ಮೊಸರು, ಮಜ್ಜಿಗೆ ಸೇವಿಸಿ ಹಾಗೂ ನಾರಿನಂಶವಿರುವ ಹಣ್ಣುಗಳನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಅಳವಡಿಸಿಕೊಳ್ಳಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ