ನವದೆಹಲಿ : ರಷ್ಯಾದ ಜೊತೆ ಕಚ್ಚಾ ತೈಲವನ್ನು ರೂಪಾಯಿ ಮೂಲಕ ಖರೀದಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಭಾರತದ ತೈಲ ಕಂಪನಿಗಳು ರೂಪಾಯಿ ಮೂಲಕ ಖರೀದಿಸುವ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಮತ್ತು ಯಾವುದೇ ಪ್ರಸ್ತಾಪ ಇಲ್ಲ.
ರಷ್ಯಾ ಅಲ್ಲದೇ ಯಾವುದೇ ದೇಶಗಳಿಂದ ರೂಪಾಯಿ ನೀಡಿ ತೈಲ ಖರೀದಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಪೆಟ್ರೋಲಿಯಂ ಖಾತೆಯ ರಾಜ್ಯ ಸಚಿವ ರಾಮೇಶ್ವರ್ ತೇಲಿ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಆರಂಭ ಮಾಡಿದ್ದಕ್ಕೆ ಅಮೆರಿಕ, ಯುರೋಪ್ ದೇಶಗಳು ರಷ್ಯಾ ವಿರುದ್ಧ ಆರ್ಥಿಕ ನಿರ್ಬಂಧವನ್ನು ಹೇರಿದೆ. ಹೀಗಾಗಿ ಭಾರತ ಮತ್ತು ರಷ್ಯಾ ಮಧ್ಯೆ ರೂಪಾಯಿ- ರುಬೆಲ್ ವ್ಯವಹಾರ ನಡೆಯಬಹುದು ಎಂದು ವರದಿಯಾಗಿತ್ತು.