ಖಾರ್ಕೀವ್ನಲ್ಲಿರುವ ಉಕ್ರೇನ್ನ ಪರಮಾಣು ಸಂಶೋಧನಾ ಕೇಂದ್ರವನ್ನು ಗುರಿಯಾಗಿಸಿಕೊಂಡು ರಷ್ಯಾ ತನ್ನ ಶೆಲ್ ದಾಳಿಯನ್ನು ಯುದ್ಧದ 32ನೇ ದಿನವೂ ಮುಂದುವರೆಸಿದೆ.
ಖಾರ್ಕೀವ್ನಲ್ಲಿರುವ ಇನ್ಸಿ$್ಟಟ್ಯೂಟ್ ಆಫ್ ಫಿಸಿಕ್ಸ್ ಅಂಡ್ ಟೆಕ್ನಾಲಜಿ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ರಷ್ಯಾ ದಾಳಿ ಮಾಡಿದೆ ಎಂದು ರಾಜ್ಯ ಪರಮಾಣು ನಿಯಂತ್ರಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಖಾರ್ಕೀವ್ನ ಅಣು ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ದಾಳಿ ನಡೆಸಿತ್ತು. ಆದರೆ ಯಾವುದೇ ವಿಕಿರಣ ಸೋರಿಕೆ ಸಂಭವಿಸಿರಲಿಲ್ಲ.
ರಷ್ಯಾ ಮತ್ತೆ ಮತ್ತೆ ದಾಳಿ ನಡೆಸುತ್ತಿರುವುದು ವಿಕಿರಣ ಸೋರಿಕೆಯ ಭೀತಿ ತಂದೊಡ್ಡಿದೆ.
ರಷ್ಯಾದ ಆಕ್ರಮಣ ಆರಂಭವಾದಾಗಿನಿಂದಲೂ ಖಾರ್ಕೀವ್ ಮೇಲೆ ರಷ್ಯಾದ ಪಡೆಗಳು ದಾಳಿ ನಡೆಸುತ್ತಲೇ ಇವೆ. ಇಲ್ಲಿನ ಹಲವಾರು ಕಟ್ಟಡಗಳು ದಾಳಿಯಿಂದಾಗಿ ನಾಶಗೊಂಡಿವೆ.