ನವದೆಹಲಿ : ಚೀನಾದಲ್ಲಿ ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿದ್ದರೂ ಭಾರತದಲ್ಲಿ ಲಾಕ್ಡೌನ್ ಮಾಡುವ ಪರಿಸ್ಥಿತಿಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ ಗೋಯಲ್ ಹೇಳಿದ್ದಾರೆ.
ಶೇ.95 ರಷ್ಟು ಜನರು ಈಗಾಗಲೇ ಲಸಿಕೆಯನ್ನು ಪಡೆದಿರುವ ಕಾರಣ ಲಾಕ್ಡೌನ್ ಮಾಡುವ ಪರಿಸ್ಥಿತಿ ಇಲ್ಲ. ಭಾರತೀಯರು ಚೀನಾದ ಜನರಿಗಿಂತ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ.
ಭಾರತವು ಕೋವಿಡ್ ಮೂಲಭೂತ ಅಂಶಗಳಾದ ಪರೀಕ್ಷೆ, ಚಿಕಿತ್ಸೆ, ಪತ್ತೆಹಚ್ಚುವಿಕೆಗೆ ಮರಳಬೇಕು ಎಂದು ಅವರು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 185 ಹೊಸ ಪ್ರಕರಣಗಳು ದೃಢಪಟ್ಟರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,402 ಕ್ಕೆ ಇಳಿದಿದೆ.