ಕಾಬೂಲ್ : ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿರುವ ತಾಲಿಬಾನ್ ನಡೆಯನ್ನು ಪ್ರತಿಭಟಿಸಲು ಅಫ್ಘಾನಿಸ್ತಾನದ ಯುವಕರು ಒಗ್ಗಟ್ಟಾಗಿ ಪರೀಕ್ಷೆಯಿಂದಲೇ ಹೊರನಡೆದಿದ್ದಾರೆ.
ನಂಗರ್ಹಾರ್ ಹಾಗೂ ಕಂದಹಾರ್ನಲ್ಲಿನ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರನಡೆದಿದ್ದಾರೆ. ವಿದ್ಯಾರ್ಥಿಗಳು ತಾಲಿಬಾನ್ ಆದೇಶದ ವಿರುದ್ಧವಾಗಿ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ.
ತಾಲಿಬಾನ್ನ ಉನ್ನತ ಶಿಕ್ಷಣ ಸಚಿವಾಲಯ ಮಹಿಳಾ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲೆ ಇತ್ತೀಚೆಗೆ ದಬ್ಬಾಳಿಕೆಯನ್ನು ಹೆಚ್ಚಿಸುತ್ತಿದ್ದು, ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣದ ಮೇಲೆ ನಿಷೇಧವನ್ನು ಹೇರಿದೆ. ಇದು ಅಂತಾರಾಷ್ಟ್ರೀಯವಾಗಿ ಭಾರೀ ಟೀಕೆಗೆ ಕಾರಣವಾಗಿದೆ.