Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಿಮ್ಮಪ್ಪನ ದರ್ಶನಕ್ಕೆ ನೋ ಎಂಟ್ರಿ!

ತಿಮ್ಮಪ್ಪನ ದರ್ಶನಕ್ಕೆ ನೋ ಎಂಟ್ರಿ!
ತಮಿಳುನಾಡು , ಗುರುವಾರ, 2 ಡಿಸೆಂಬರ್ 2021 (16:43 IST)
ತಿರುಪತಿ : ತಮಿಳುನಾಡು, ಆಂಧ್ರದ ರಾಯಲಸೀಮೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಮತ್ತೊಮ್ಮೆ ತಿರುಮಲ ಘಾಟ್ನಲ್ಲಿ ಬೃಹತ್ ಬಂಡೆ ಉರುಳಿದೆ.
ಅತೀವೃಷ್ಠಿಯ ಪರಿಣಾಮ ತಿರುಪತಿಯಿಂದ ತಿರುಮಲಕ್ಕೆ ತೆರಳುವ ಘಾಟ್ ರಸ್ತೆ ಮೇಲೆ ಬೃಹತ್ ಬಂಡೆ ಕಲ್ಲುಗಳು ಉರುಳಿ ಬಿದ್ದಿದೆ. ಇದರಿಂದಾಗಿ ರಸ್ತೆ ಸಂಪೂರ್ಣವಾಗಿ ಹಾನಿಯಾಗಿದ್ದು, ತಾತ್ಕಾಲಿಕವಾಗಿ ತಿರುಪತಿ ತಿಮ್ಮಪ್ಪನ ದರ್ಶನ ರದ್ದು ಮಾಡಲಾಗಿದೆ. 
ತಿರುಮಲಕ್ಕೆ ತೆರಳುವ 2ನೇ ಘಾಟ್ದ ರಸ್ತೆಯಲ್ಲಿ ಎಂದರೆ ತಿಮ್ಮಪ್ಪನ ದೇಗುಲದಿಂದ ಸುಮಾರು 16 ಕಿ.ಮೀ ದೂರದಲ್ಲಿ ಭೂಕುಸಿತ ಉಂಟಾಗಿದೆ. ಒಂದು ತಿಂಗಳ ಅವಧಿಯಲ್ಲಿ ತಿರುಮಲ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿದ್ದು ಇದು ಎರಡನೇ ಬಾರಿ. ಈ ಭೂಕುಸಿತಕ್ಕೆ ಭಾರೀ ಮಳೆಯೇ ಕಾರಣವಾಗಿದ್ದು, ನವೆಂಬರ್ 11ರಂದು ಘಾಟ್ ರಸ್ತೆಗಳನ್ನು ಮುಚ್ಚಲಾಗಿತ್ತು. ನವೆಂಬರ್ 20ರಂದು ಮತ್ತೆ ಘಾಟ್ ರಸ್ತೆಯನ್ನು ತೆರೆಯಲಾಗಿತ್ತು. ಆದರೆ ಇದೀಗ ಮತ್ತೆ ಭೂಕುಸಿತವಾಗಿದೆ.
ನವೆಂಬರ್ನಲ್ಲಿ ದೇಶಾದ್ಯಂತ  645 ಬಾರಿ ಹೆಚ್ಚು ಮಳೆ, 168 ಬಾರಿ ಅತೀ ಹೆಚ್ಚು ಮಳೆ ಆಗಿದೆ. 11 ಬಾರಿ 204 ಸೆಂಟಿಮೀಟರ್ಗಿಂತ ಹೆಚ್ಚು ಮಳೆ ಬಿದ್ದಿದೆ. ಇದು ಕಳೆದ ವರ್ಷದ ಮಳೆ ಸಮವಾಗಿದೆ. ಐದು ವರ್ಷಗಳಲ್ಲಿಯೇ ನವೆಂಬರ್ನಲ್ಲಿ ಅತೀ ಮಳೆ ಆಗಿದೆ ಎಂದು ಐಎಂಡಿ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈಲುಗಳ ಸೇವೆ ತಾತ್ಕಾಲಿಕ ರದ್ದು!